ಶುಕ್ರವಾರ, ನವೆಂಬರ್ 22, 2019
27 °C

ಪೌರಕಾರ್ಮಿಕರಿಂದ ಮತದಾನ ಜಾಗೃತಿ ಜಾಥಾ

Published:
Updated:
ಪೌರಕಾರ್ಮಿಕರಿಂದ ಮತದಾನ ಜಾಗೃತಿ ಜಾಥಾ

ಹಾಸನ: ಪ್ರತಿ ನಿತ್ಯ ನಗರದ ಕಸ ಗುಡಿಸಿ ಸ್ವಚ್ಚ ಮಾಡುವ  ನಗರ ಸಭೆ ಪೌರ ಕಾರ್ಮಿಕರು  ಮಂಗಳ ವಾರ ನಗರದಲ್ಲಿ ಮತದಾರರ ಜಾಗೃತಿ ಜಾಥಾ ನಡೆಸುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದರು. ಮೆರವಣಿಗೆಯುದ್ದಕ್ಕೂ ವಿವಿಧ ಘೋಷಣೆಗಳನ್ನು ಕೂಗುತ್ತ, ಜನರಿಗೆ ಕರ ಪತ್ರಗಳನ್ನು ಹಂಚತ್ತಾ ತಪ್ಪದೆ ಮತದಾನ ಮಾಡುವಂತೆ ಒತ್ತಾಯಿಸಿದರು.ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯ ಮಾರ್ಗ ದರ್ಶನದಲ್ಲಿ ಜಾಗೃತಿ ನಡಿಗೆ ಆಯೋಜಿಸಲಾಗಿತ್ತು. ಮೆರವಣಿಗೆ ಯಲ್ಲಿ ಅಧಿಕಾರಿಗ ಳೊಂದಿಗೆ ಬಂದ ಪೌರ ಕಾರ್ಮಿಕರು ದಾರಿಯುದ್ದಕ್ಕೂ ಸಾರ್ವಜ ನಿಕರಿಗೆ ಮಾತ್ರವಲ್ಲದೆ ಬಸ್ಸು, ಕಾರು, ಆಟೋ, ಬೈಕ್ ಹೀಗೆ ವಿವಿಧ ವಾಹನಗಳಲ್ಲಿ ಪ್ರಯಾಣ ಮಾಡು ತ್ತಿರುವವರಿಗೂ ಕರಪತ್ರಗಳನ್ನು ಹಂಚಿದರು.`ಓದು ಬರಹ ಬರದ ನಾವೇ ಮತ ಹಾಕ್ತಿವಿ ಜಾಸ್ತಿ ಓದಿರೋ ನೀವು ಮತ ಹಾಕದಿದ್ರೆ ಹೇಗೆ' ಎಂದು ಕೆಲವರನ್ನು ಪ್ರಶ್ನಿಸಿದರು. ಮೆರವಣಿಗೆ ಮೂಲಕ ಬಂದ ಕಾರ್ಮಿಕರು ಎನ್.ಆರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು. ನಗರದ ಬಿ.ಎಂ ರಸ್ತೆ .ಹಳೇ ಬಸ್ ನಿಲ್ದಾಣ ರಸ್ತೆ, ಮಹಾವೀರ ವೃತ್ತ, ಹೊಸಲೈನ್ ರಸ್ತೆ ಮತ್ತಿತರೆಡೆಗಳಲ್ಲೂ ಸಂಚರಿಸಿದರು.ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಜಾಥಾ ಉದ್ಘಾಟಿಸಿದರು. ನಗರ ಸಭೆ ಆಯುಕ್ತ ನಾಗಭೂಷಣ,  ಮತದಾ ರರ ಜಾಗೃತಿ ಸಮಿತಿ ನೋಡಲ್ ಅಧಿಕಾರಿ, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ತಹಶೀಲ್ದಾರ್ ಮಂಜುನಾಥ್, ನಗರ ಸಭೆಯ ಅಧಿಕಾರಿಗಳು ಹಾಜರಿದ್ದರು.

ಪ್ರತಿಕ್ರಿಯಿಸಿ (+)