ಪೌರಕಾರ್ಮಿಕರ ಪ್ರತಿಭಟನೆ ವಾಪಸ್
ಹುಬ್ಬಳ್ಳಿ: ಪೌರ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಮೇಯರ್ ಪಾಂಡುರಂಗ ಪಾಟೀಲ ಅವರು ಭರವಸೆ ನಿಡಿದ ಹಿನ್ನೆಲೆಯಲ್ಲಿ ಪಾಲಿಕೆ ಪೌರ ಕಾರ್ಮಿಕರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಂಡರು.
ನಗರದ ಸ್ಟೇಶನ್ ರಸ್ತೆಯ ಅಂಬೇಡ್ಕರ್ ಪುತ್ಥಳಿಗೆ ಪೂಜೆ ಸಲ್ಲಿಸಿ ಬುಧವಾರ ಪ್ರತಿಭಟನಾ ರ್ಯಾಲಿ ಆರಂಭಿಸಿದ ಕಾರ್ಮಿಕರನ್ನು ಭೇಟಿ ಮಾಡಿ ಮೇಯರ್ ಪಾಂಡುರಂಗ ಪಾಟೀಲ ಅವರು ಸಂಧಾನ ನಡೆಸಿದರು. ಇದೇ 23ರಂದು ಸಭೆ ಸೇರಿ ಕಾರ್ಮಿಕರ ಸಮಸ್ಯೆಗಳನು ಆಲಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ಕೊಟ್ಟ ಹಿನ್ನೆಲೆಯನ್ನು ಕಾರ್ಮಿಕರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಂಡರು.
`ಪೌರ ಕಾರ್ಮಿಕರಿಗೆ 6ನೇ ವೇತನ ಶ್ರೇಣಿ ಜಾರಿ ಮಾಡುವುದಾಗಿ ಮೇಯರ್ ಭರವಸೆ ಕೊಟ್ಟಿದ್ದಾರೆ. ಕಾರ್ಮಿಕರಿಗೆ ಆಸ್ಪತ್ರೆ ಕಾರ್ಡ್ ಹಾಗೂ ಸೂಕ್ತ ಸಲಕರಣೆಗಳನ್ನು ವಿತರಣೆ ಮಾಡಲು ಮೇಯರ್ ಒಪ್ಪಿದ್ದಾರೆ. ಈ ಬಗ್ಗೆ 23ರಂದು ನಡೆಯುವ ಸಭೆಯಲ್ಲಿ ಚರ್ಚಿಸಲಿದ್ದೇವೆ.
ಮೇಯರ್ ಅವರ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಒಂದುವೇಳೆ ಅಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಭೆ ವಿಫಲವಾದರೆ ನಾವು ಮತ್ತೆ ಪ್ರತಿಭಟನೆ ನಡೆಸುತ್ತೇವೆ~ ಎಂದು ಪಾಲಿಕೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಗಂಗಾಧರ ಎಚ್ ಟಗರಗುಂಟಿ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.