ಬುಧವಾರ, ಜನವರಿ 22, 2020
16 °C

ಪೌರಕಾರ್ಮಿಕರ ಹುದ್ದೆ ನೇಮಕಾತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ‘ಬಿಬಿಎಂಪಿಯಲ್ಲಿ ಖಾಲಿ­ಯಿರುವ 4,000 ಕ್ಕೂ ಹೆಚ್ಚು ಪೌರ­ಕಾರ್ಮಿಕರ ಹುದ್ದೆಗಳಿಗೆ ತಕ್ಷಣದಲ್ಲಿ ನೇಮಕಾತಿಗೆ ಕ್ರಮಕೈಗೊಳ್ಳಬೇಕು’ ಎಂದು ಬಿಬಿಎಂಪಿ ಪೌರ­ಕಾರ್ಮಿಕರ ಮತ್ತು ಆರೋಗ್ಯ ಗ್ಯಾಂಗ್‌ಮೆನ್‌ಗಳ ಸಂಘವು ಆಗ್ರಹಿಸಿದೆ.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯ­ದರ್ಶಿ ಪೋತಣ್ಣ ಅವರು, ‘ಪೌರ­ಕಾರ್ಮಿಕರ ನೇಮಕಾತಿಗೆ ಹಿಂದಿನ ಸರ್ಕಾರ ಅನುಮೋದನೆ ನೀಡಿದ್ದು,  ಈಗ ಅಧಿಕಾರಿಗಳು  ಪತ್ರ ವ್ಯವಹಾರದಲ್ಲೇ ಕಾಲಹರಣ ಮಾಡು­ತ್ತಿದ್ದಾರೆ’ ಎಂದು ಆರೋಪಿಸಿದರು.‘ಬಿಬಿಎಂಪಿಯಲ್ಲಿ ಗ್ರಾ.ಪಂಚಾಯಿತಿ ಸೇರ್ಪಡೆ­ಯಾಗಿದೆ. ಅಲ್ಲಿ ಕೆಲಸ ಮಾಡು­ತ್ತಿರುವ 193 ದಿನ­ಗೂಲಿ ಪೌರಕಾರ್ಮಿಕರನ್ನು ಕಾಯಂ­ಗೊಳಿಸಿ, ಅವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡಬೇಕು’ ಎಂದರು.‘ಜಕ್ಕರಾಯನಕೆರೆ, ಕೋಡಿಹಳ್ಳಿ, ಪಾಟರಿಟೌನ್‌, ವಿಲಿಯಮ್ಸ್‌ ಟೌನ್‌, ಕುಂಬಾರಗುಂಡಿ, ಜೆ.ಜೆ.ಆರ್‌ ನಗರ, ಕಸ್ತೂರ ಬಾ ನಗರ ಮತ್ತು ಇಂದಿರಾ­ನಗರದ ಬಳಿ ಇರುವ ಕದಿರೇನಪಾಳ್ಯ ಇತರೆ ಕಡೆ ನಿರ್ವಸಿತ ಪೌರಕಾರ್ಮಿಕ­ರಿಗೆ ನಿವೇಶನವನ್ನು ನೀಡುವುದಾಗಿ ಬಿಬಿಎಂಪಿ ಭರವಸೆಯನ್ನು ನೀಡಿತ್ತು. ಆದರೆ. ಆ ಭರವಸೆಯನ್ನು ಈಡೇರಿ­ಸುವ ಪ್ರಯತ್ನ­ವನ್ನು ಬಿಬಿಎಂಪಿ ಮಾಡಿಲ್ಲ’ ಎಂದು ಹೇಳಿದರು.‘ಪೌರಕಾರ್ಮಿಕರು ಹಾಗೂ ಗ್ಯಾಂಗ್‌­ಮೆನ್‌ಗಳಿಗೆ ಪಾಲಿಕೆ ಆರೋಗ್ಯ ಗುರುತಿನ ಚೀಟಿ ನೀಡಿದೆ. ಆದರೆ, ಪಾಲಿಕೆಯು ಗುರುತಿಸಿರುವ ಆಸ್ಪತ್ರೆ­ಗಳಿಗೆ ಹೋದರೆ ಮುಂಗಡ ಹಣವನ್ನು ಕಟ್ಟಲು ಒತ್ತಾಯಿಸುತ್ತಾರೆ. ಇದರಿಂದ, ಆಸ್ಪತ್ರೆ ಆಡಳಿತ ಮಂಡಳಿಗಳ ಜತೆ ತುರ್ತು ಸಭೆ ನಡೆಸಿ ಸಮಸ್ಯೆಯನ್ನು ಬಗೆ ಹರಿಸಬೇಕು’ ಎಂದು ಒತ್ತಾಯಿಸಿದರು.‘ಬಿಬಿಎಂಪಿಯು ಒಂದು ತಿಂಗಳ ಅವಧಿಯೊಳಗೆ ಈ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದರೆ, ಪ್ರತಿಭಟನೆ ನಡೆಸಲಾ­ಗುವುದು’ ಎಂದರು.

ಪ್ರತಿಕ್ರಿಯಿಸಿ (+)