ಪೌರಾಣಿಕ ನಾಟಕಗಳ ಸರದಾರ

7

ಪೌರಾಣಿಕ ನಾಟಕಗಳ ಸರದಾರ

Published:
Updated:
ಪೌರಾಣಿಕ ನಾಟಕಗಳ ಸರದಾರ

ಕೊಳ್ಳೇಗಾಲ: ಪೌರಾಣಿಕ ನಾಟಕ ಕಲೆ ಉಳಿವಿಗೆ ತಮ್ಮನ್ನೇ ತೊಡಗಿಸಿ ಕೊಂಡು ಶ್ರಮಿಸುತ್ತಿರುವ ಬಹುಮುಖ ವ್ಯಕ್ತಿತ್ವದ ಶಿಕ್ಷಕ ಕೆರಳ್ಳಿ ಎಂ. ನಂಜುಂಡಸ್ವಾಮಿ.ತಾಲ್ಲೂಕಿನ ಆಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ರುವ ಇವರು ಪ್ರವೃತ್ತಿಯಲ್ಲಿ ಸಾಹಿತ್ಯ ಆರಾಧಕರು. ಅದರ ಜತೆಗೆ ಗೀತೆರಚನೆಕಾರರು ಹಾಗೂ ನಾಟಕ ನಿರ್ದೇಶಕರು. ಇವರ ತಂದೆ ಸಹ ಮೂಲತಃ ಶಿಕ್ಷಕ ವೃತ್ತಿಯ ಜತೆ ಕಲಾಸೇವೆ ಸಲ್ಲಿಸಿದಂತೆ ಇವರೂ ಸಹ ಅವರ ಮಾರ್ಗವನ್ನೇ ಅನುಸರಿಸಿ ನಾಟಕ ಕಲೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ಈಗ ನೀಡುತ್ತಿದ್ದಾರೆ.350ಕ್ಕೂ ಹೆಚ್ಚು ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ನಾಟಕ ನಿರ್ದೇಶನ ಮಾಡಿದ್ದು, `ಶನಿಪ್ರಭಾವ~, ದಕ್ಷಯಜ್ಞ, ಕುರುಕ್ಷೇತ್ರ, ರತ್ನಮಾಂಗಲ್ಯ ಇವರ ಹೆಸರಾಂತ ನಾಟಕಗಳು. ಅನೇಕ ಸಾಮಾಜಿಕ ನಾಟಕಗಳಿಗೆ ಹಾಡು ರಚಿಸಿ ರಾಗಸಂಯೋಜನೆ ಮಾಡಿದ್ದಾರೆ.ಇವರ ತಂದೆ ಕೆ.ಎನ್. ಮಹದೇವಣ್ಣ ಮತ್ತು ಸಹೋದರ ಎಂ. ಮಹದೇವಸ್ವಾಮಿ ಹೆಸರಾಂತ ನಾಟಕಕಾರರು, ಸಾಹಿತಿ,ರಾಗಸಂಯೋಜಕ ಹಾಗೂ ಶ್ರೇಷ್ಠ ಗಾಯಕರು ಇವರ ಮಾರ್ಗದರ್ಶನದಲ್ಲಿ ಕಲೆಯನ್ನು ಮೈಗೂಡಿಸಿಕೊಂಡ ನಂಜುಂಡಸ್ವಾಮಿ, ನಾಟಕ ನಿರ್ದೇಶನದ ಜತೆಗೆ ಹಲವಾರು ಸಿಡಿಗಳಿಗೆ ಸಾಹಿತ್ಯ ಮತ್ತು ರಾಗಸಂಯೋಜನೆ ಮಾಡಿದ್ದಾರೆ.ಇವರ ಹೆಸರಾಂತ ಸಿಡಿ `ಮಾದೇವನ ಘನ ಲೀಲೆ~ ವಿಡಿಯೋ ಚಿತ್ರೀಕರಣದಲ್ಲಿ ಚಲನಚಿತ್ರ ನಟರು ನಡೆಸಿ ಗೀತೆಗಳಿಗೆ ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಹೆಸರಾಂತ ಗಾಯಕ ಗಾಯಕಿಯರು ಇವರ ಸಂಗೀತ ನಿರ್ದೇಶನದಲ್ಲಿ ಹಾಡಿದ್ದಾರೆ.ಮಹದೇಶ್ವರ ಬೆಟ್ಟ, ಚಿಕ್ಕಲ್ಲೂರು ಮತ್ತಿತರ ಜಾತ್ರೆಗಳಲ್ಲಿ ಇವರ ಸಾಹಿತ್ಯವನ್ನು ಒಳಗೊಂಡ ಕ್ಯಾಸೆಟ್‌ಗಳಿಗೆ ಬಹಳ ಬೇಡಿಕೆ. ಮುಳ್ಳಾಚಮ್ಮ, ಧರೆಗೆ ಬಂದ ಮಾದಪ್ಪ, ಕರುಣಾಂತರಂಗ ಮಾದಪ್ಪ, ಮಹಾಮಹಿಮ ಮಂಟೇಲಿಂಗಯ್ಯ, ಇವರ ಸಂಗೀತ ನಿರ್ದೇಶನದಲ್ಲಿ ಹೊರಬಂದಿರುವ ಹೆಸರಾಂತ ಸಿಡಿಗಳು.ಇನ್ನೂ ಹಲವಾರು ಭಕ್ತಿಗೀತೆಗಳು ಹಾಗೂ ದಕ್ಷ ಯಜ್ಞ, ಶನಿಪ್ರಭಾವ, ಕುರುಕ್ಷೇತ್ರ ನಾಟಕಗಳನ್ನು ಸಿಡಿ ರೂಪದಲ್ಲಿ ಹೊರತರಲು ಸಿದ್ಧತೆ ನಡೆಸಿದ್ದಾರೆ. ಯಾವುದೇ ಹಾಡುಗಳಿಗೂ ರಾಗ ಸಂಯೋಜನೆ ಮಾಡುವುದರಲ್ಲಿ ಸ್ವಂತಿಕೆ ಪ್ರದರ್ಶ ನವೇ ಇವರ ಶೈಲಿ. ಇವರ ನಾಟಕಗಳು ಪ್ರತಿ ವರ್ಷ ಸುತ್ತೂರು ಜಾತ್ರಾ ಮಹೋತ್ಸವ ಹಾಗೂ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲೂ ಪ್ರದರ್ಶನಗೊಂಡಿವೆ.ಅಂತರಾಷ್ಟ್ರೀಯ ರೋಟರಿ ಸಂಸ್ಥೆ, ಖ್ಯಾತ ಚಲನಚಿತ್ರ ನಿರ್ಮಾಪಕ ಚೆನ್ನೇಗೌಡರು, ಪೊಲೀಸ್ ಇಲಾಖೆ ಹಾಗೂ ಗ್ರಾಮೀಣ ಪ್ರದೇಶಗಳ ಸಂಘ ಸಂಸ್ಥೆಗಳಿಂದ ಸನ್ಮಾನಿಸಿ ಗುರುತಿಸಲ್ಪಟ್ಟಿದ್ದಾರೆ. ಇವರು ಆರೋಗ್ಯ, ಮೊಬೈಲ್ ಪುರಾಣ ಸೇರಿದಂತೆ ಅನೇಕ ಸಾಮಾಜಿಕ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ.ಶ್ರೇಷ್ಠ ಹಾರ‌್ಮೋನಿಯಂ ಹಾಗೂ ಕ್ಯಾಸಿಯೋ ವಾದಕರಾಗಿದ್ದು, ಪಟ್ಟಣದಲ್ಲಿ ಹಲವಾರು ಮಕ್ಕಳಿಗೆ ಕ್ಯಾಸಿಯೋ ತರಬೇತಿ ನೀಡುತ್ತಿದ್ದಾರೆ. ಗ್ರಾಮೀಣ ಪ್ರತಿಭಾನ್ವಿತ ಮಕ್ಕಳಿಗೆ ಮಾರ್ಗದರ್ಶನ ನೀಡಿ ಪ್ರತಿಭಾಕಾ ರಂಜಿಯಲ್ಲಿ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವಂತಾಗಿದೆ. ಗ್ರಾಮೀಣ ಪೌರಾಣಿಕ ನಾಟಕ ಕಲೆ ಜನರ ಆರೋಗ್ಯದ ಮಲೆ ಮಹತ್ವದ ಪರಿಣಾಮ ಬೀರುವುದರಿಂದ ಇಂತಹ ಕಲೆಯನ್ನು ಉಳಿಸಿ ಬೆಳೆಸಲು ಹೆಚ್ಚು ಒತ್ತುನೀಡಬೇಕು ಎನ್ನುತ್ತಾರೆ ನಂಜುಂಡಸ್ವಾಮಿ.            

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry