ಪೌಷ್ಟಿಕ ಆಹಾರ ಒದಗಿಸಲು ಆಗ್ರಹ

7

ಪೌಷ್ಟಿಕ ಆಹಾರ ಒದಗಿಸಲು ಆಗ್ರಹ

Published:
Updated:

ಹೊಸಪೇಟೆ: ಪೌಷ್ಟಿಕ ಆಹಾರ ಹಾಗೂ ಹಾಸ್ಟೆಲ್‌ನಲ್ಲಿ ಮೂಲಸೌಕರ್ಯಗಳಿಗೆ ಆಗ್ರಹಿಸಿ ಎಂ.ಪಿ.ಪ್ರಕಾಶನಗರ ಹಾಸ್ಟೆಲ್ ವಿದ್ಯಾರ್ಥಿಗಳು ಆಹಾರದೊಂದಿಗೆ ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.ಬುಧವಾರ ಬೆಳಿಗ್ಗೆ ನೀಡಿದ ಆಹಾರ ಪೌಷ್ಠಿಕವಾಗಿರಲಿಲ್ಲ ಅನೇಕ ದಿನಗಳಿಂದ ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸರಿಪಡಿಸುತ್ತಿಲ್ಲ,  ಕೊಳೆತ ತರಕಾರಿಗಳಿಂದ ಸಿದ್ಧಪಡಿಸಿದ ಆಹಾರ ವನ್ನು ಮಕ್ಕಳಿಗೆ ನೀಡಲಾಗುತ್ತಿದೆ ಎಂದು ಆಹಾರದೊಂದಿಗೆ ಚಿತ್ತವಾಡಗಿ ರಸ್ತೆಯ ಸಮಾಜಕಲ್ಯಾಣಾಧಿಕಾರಿಗಳ ಕಚೇರಿಗೆ ಬಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣನಾಯ್ಕ, ವೆಂಕಟೇಶ್‌ನಾಯ್ಕ, ಮಾರುತಿ, ಶಂಕರನಾಯ್ಕ ಹಾಸ್ಟೆಲ್ ಆರಂಭದಿಂದಲೂ ಅನೇಕ ಬಾರಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ “ಕೇವಲ ಹೇಳಿಕೆಗಳನ್ನು ನೀಡಿದಾಗ ನಾಲ್ಕು ದಿನ ಆಹಾರವನ್ನು ಸರಿಪಡಿಸು ತ್ತಾರೆ ನಂತರ ಮತ್ತೆ ಅದೇ ಪ್ರವೃತ್ತಿ ಯನ್ನು ಮುಂದುವರೆಸುತ್ತಾರೆ” ಎಂದು ಆರೋಪಿಸಿದರು.ಬೇಡಿಕೆಗಳು: ಪ್ರತಿನಿತ್ಯ ಪೌಷ್ಟಿಕ ಆಹಾರ ಪೂರೈಕೆ ಮಾಡಬೇಕು, ಹಾಸ್ಟೆಲ್‌ನಲ್ಲಿ ಮೂಲಸೌಕರ್ಯಗಳನ್ನು ಸರಿಪಡಿಸ ಬೇಕು, ಶೌಚಾಯಲಯ, ಕುಡಿಯುವ ನೀರು ವಿದ್ಯುತ್ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.ಅಧಿಕಾರಿಗಳ ಬೇಜವಾಬ್ದಾರಿ ಹೇಳಿಕೆಗೆ ಕಡಿವಾಣ ಹಾಕಬೇಕು ಎಂದು ತಮ್ಮ ಬೇಡಿಕೆ ಗಳನ್ನು ಸಮಾಜ ಕಲ್ಯಾಣಾಧಿಕಾರಿ ಮಾಣಿಕ್ಯಾಚಾರ್ಯಗೆ ಸಲ್ಲಿಸಿದರು.ತಕ್ಷಣವೇ ಮನವಿಗೆ ಸ್ಪಂದಿಸಿದ ಅಧಿಕಾರಿ ತಮ್ಮ ಗಮನಕ್ಕೆ ತರಲಾಗಿ ರುವ ವಿಷಯಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. ಹಾಸ್ಟೆಲ್‌ನಲ್ಲಿರುವ ಬಹುತೇಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry