ಮಂಗಳವಾರ, ನವೆಂಬರ್ 12, 2019
28 °C

ಪ್ಯಾರಾಲಿಂಪಿಕ್ಸ್: ಚೇತನಾ ಶಾಲೆಯ ಅಭಿಜಿತ್‌ಗೆ ಚಿನ್ನ

Published:
Updated:

ಕಾರ್ಕಳ: ಇಲ್ಲಿನ ಚೇತನಾ ವಿಶೇಷ ಶಾಲೆಯ ವಿದ್ಯಾರ್ಥಿ ಅಭಿಜಿತ್ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಸಾನಿಧ್ಯ ಪನಾಮಾ ಕ್ರೀಡಾ ಮಹೋತ್ಸವದ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿರುತ್ತಾನೆ. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಫೋಟೋಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ ಸಭಾಭವನದಲ್ಲಿ ಅಭಿನಂದಿಸಲಾಯಿತು.ಕಾರ್ಪೊರೇಶನ್ ಬ್ಯಾಂಕ್ ಜನರಲ್ ಮ್ಯಾನೇಜರ್ ರಾಮಮೂರ್ತಿ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ವಿದ್ಯಾರ್ಥಿಯ ವಿಶೇಷ ಸಾಧನೆಯನ್ನು ಗುರುತಿಸಿ ವಿನ್ಯಾಸ್ ಎಂಜಿನಿಯರ್ ಶ್ರೀನಿವಾಸ್ ಪೈ ಅವರು ಅಮಿತ್ ಪೈ ಸ್ಮರಣಾರ್ಥ ಗೌರವಧನದೊಂದಿಗೆ ಬಹುಮಾನ ನೀಡಿ ಗೌರವಿಸಿದರು.

ಅತಿಥಿಗಳಾಗಿ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ರಾಮಚಂದ್ರ ಜೋಷಿ, ಬೆಂಗಳೂರಿನ ಕೋದಂಡ ಜೋಶಿ, ರೋಟರ‌್ಯಾಕ್ಟ್ ಕ್ಲಬ್‌ನ ಅಧ್ಯಕ್ಷ ಸಂದೀಪ್ ಜೈನ್, ಫೋಟೋಗ್ರಾಫರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ದತ್ತಾತ್ರೇಯ, ಲಯನ್ಸ್ ಗವರ್ನರ್ ಕೆ.ಸಿ.ಪ್ರಭು, ಸದಾನಂದ ಉಪಾಧ್ಯಾಯ, ಕಟ್ಟಡ ಸಮಿತಿ ಗೌರವಾಧ್ಯಕ್ಷ ಗಣಪತಿ ಹೆಗ್ಡೆ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)