ಪ್ಯಾಸೆಂಜರ್ ಚಿತ್ರಕ್ಕೆ ಕ್ಲೈಮ್ಯಾಕ್ಸ್

5

ಪ್ಯಾಸೆಂಜರ್ ಚಿತ್ರಕ್ಕೆ ಕ್ಲೈಮ್ಯಾಕ್ಸ್

Published:
Updated:

ಶಿವಸುಂದರ್ ನಿರ್ಮಿಸುತ್ತಿರುವ `ಪ್ಯಾಸೆಂಜರ್~ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ತಾವರೆಕೆರೆ ಮಾರಮ್ಮನ ದೇವಸ್ಥಾನದಲ್ಲಿ ನಿರ್ದೇಶಕ ರೂಪೇಶ್.ಡಿ.ರಾಜಾ ಚಿತ್ರಿಸಿಕೊಂಡರು.

 

ಶಶಿಕುಮಾರ್, ಜೈಜಗದೀಶ್, ಮಯೂರ್ ಪಟೇಲ್, ಜಾಕಿಚಂದ್ರು, ಕಾಶಿ, ಪ್ರಕಾಶ್‌ಶೆಣೈ, ಬ್ಯಾಂಕ್ ಜನಾರ್ದನ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ವೀನಸ್‌ಮೂರ್ತಿ ಛಾಯಾಗ್ರಹಣವಿದೆ. ಆರ್.ಡಿ.ರವಿ ಸಂಕಲನ, ಮಾಸ್‌ಮಾದ ಸಾಹಸ ನಿರ್ದೇಶನ ಇದೆ.ಮಂಜು ಮಾಂಡವ್ಯ ಮಾತು ಬರೆದಿದ್ದಾರೆ.  ಶಶಿಕುಮಾರ್, ಮಯೂರ್ ಪಟೇಲ್, ಜೈಜಗದೀಶ್, ಅರ್ಚನ, ಸತ್ಯಜಿತ್, ಪ್ರಕಾಶ್ ಶೆಣೈ ಮುಂತಾದವರು ನಟಿಸಿದ್ದಾರೆ.`ಸ್ತ್ರೀಶಕ್ತಿ~ಗೆ ಭರದ ಚಿತ್ರೀಕರಣ`ಸ್ತ್ರೀಶಕ್ತಿ~ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ತಂದೆತಾಯಿ ಅಪ್ಪಣೆ ಪಡೆದು ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಿ ಮನೆಗೆ ಬಂದ ಮಗ ಹಾಗೂ ಸೊಸೆಯನ್ನು ಪೋಷಕರು ಸಂತೋಷದಿಂದ ಬರ ಮಾಡಿಕೊಳ್ಳುತ್ತಾರೆ.ಈ ಸನ್ನಿವೇಶವನ್ನು ನಿರ್ದೇಶಕ ಎಸ್.ವಿ.ಸುರೇಶ್ ಚಿತ್ರಿಸಿಕೊಂಡರು. ರಾಜೀವ್, ಸೋನು, ಶರತ್‌ಲೋಹಿತಾಶ್ವ, ತುಳಸಿ, ಶಿವಮಣಿ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

 

ಎಸ್.ವಿ.ಸುರೇಶ್ ನಿರ್ಮಾಣದ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದಾರೆ. ಕೆ.ಶಶಿಧರ್ ಛಾಯಾಗ್ರಹಣವಿದೆ. ರಾಜೀವ್, ಸೋನು, ಸುಂದರರಾಜ್, ತುಳಸಿ ರಾಮಕೃಷ್ಣ ಮುಂತಾದವರ ಅಭಿನಯವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry