ಮಂಗಳವಾರ, ಮೇ 11, 2021
20 °C

ಪ್ರಕಾಶಕ-ಅಸ್ಸಾಂಜ್ ಮಧ್ಯೆ ಜಗಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್, (ಪಿಟಿಐ): ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜ್ ಅವರ ಆತ್ಮಕಥೆ ಕುರಿತ ಕೃತಿ ಪುಸ್ತಕದ ಅಂಗಡಿಗಳಲ್ಲಿ ಗುರುವಾರ ಭರದಿಂದ ಮಾರಾಟವಾಗಿದೆ.ಆದರೆ ಒಪ್ಪಂದ ಉಲ್ಲಂಘನೆ ಮತ್ತು ಅನುಮತಿ ಇಲ್ಲದೇ ಪುಸ್ತಕದ ಕರಡು ಪ್ರತಿ ಬಿಡುಗಡೆ ಮಾಡಿದ್ದರಿಂದ ಅಸ್ಸಾಂಜ್ ಮತ್ತು ಪ್ರಕಾಶಕರ ಮಧ್ಯೆ ಜಗಳ ಶುರುವಾಗಿದೆ.ಪುಸ್ತಕ ಪ್ರಕಾಶಕ ಕ್ಯಾನೊಂಗೆಟ್ ಪ್ರಕಾರ, ಗುರುವಾರದಿಂದ ಪುಸ್ತಕ ಅಂಗಡಿ ಮತ್ತು ಆನ್‌ಲೈನ್ ಮೂಲಕ ಮಾರಾಟ ಆರಂಭಿಸಲಾಗಿದೆ.ಆದರೆ ಪುಸ್ತಕದ ಕೆಲಸ ಇನ್ನೂ ಮುಂದುವರಿ ದಿದೆ. ಅದು ಇನ್ನೂ ಪರಿಶೀಲನೆ ಮಾಡಿಲ್ಲ ಮತ್ತು ತಪ್ಪಾಗಿರುವ ಕರಡು ಪ್ರತಿಯಿಂದಲೇ ಲಾಭ ಮಾಡಿಕೊಳ್ಳಲು ಪ್ರಕಾಶಕರು ಯತ್ನಿಸುತ್ತಿದ್ದಾರೆ ಎಂಬುದು ಅಸ್ಸಾಂಜ್ ಅವರ ಆರೋಪ. ಪುಸ್ತಕದ ಹೆಸರು `ಜುಲಿಯನ್ ಅಸ್ಸಾಂಜ್:  ಅನಧಿಕೃತ ಆತ್ಮಕತೆ~, ಆಸ್ಟ್ರೇಲಿಯಾದಲ್ಲಿನ ಅಸ್ಸಾಂಜ್ ಅವರ ಆರಂಭಿಕ ಜೀವನ ಮತ್ತು ಕಂಪ್ಯೂಟರ್ ಮೂಲಕ ವಿವಾದಾತ್ಮಕ ವೆಬ್‌ಸೈಟ್ ಶೋಧಿಸಿದ ಬಗ್ಗೆ ಬೆಳಕು ಚೆಲ್ಲಿದೆ.ಅಸ್ಸಾಂಜ್ ಅಜ್ಞಾತ ಬರಹಗಾರರ ಜತೆ ಕೆಲಸ ಮಾಡಿದ್ದಾರೆ. ಆದರೆ ನಂತರ ಅದರಿಂದ ಹೊರ ಬಂದರು. ನಂತರ ಒಪ್ಪಂದ ರದ್ದತಿಗೆ ಪ್ರಯತ್ನಿಸಿದರು ಎಂದು ಪ್ರಕಾಶಕ ಕ್ಯಾನೊಂಗೆಟ್ ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.