ಭಾನುವಾರ, ಜೂನ್ 13, 2021
23 °C

ಪ್ರಕಾಶ್‌ ಝಾ ಕಣಕ್ಕಿಳಿಸಿದ ಜೆಡಿಯು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಪಟ್ನಾ (ಐಎಎನ್‌ಎಸ್‌): ಸಂಯುಕ್ತ ಜನತಾ ದಳ (ಜೆಡಿಯು) ಪಕ್ಷವು ಬಿಹಾರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ನವದೆಹಲಿಯಲ್ಲಿ ಭಾನುವಾರ ಬಿಡುಗಡೆಗೊಳಿಸಿತು. ಚಲನಚಿತ್ರ ನಿರ್ಮಾಪಕ ಪ್ರಕಾಶ್ ಝಾ, ಉದ್ಯಮಿ ಅನಿಲ್ ಕುಮಾರ್ ಶರ್ಮಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್‌ ಯಾದವ್‌ ಅವರು ಪಟ್ಟಿಯಲ್ಲಿರುವ ಪ್ರಮುಖ ಹುರಿಯಾಳುಗಳಾಗಿದ್ದಾರೆ. 

ಆರು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ ಒಂದು ದಿನದ ಬಳಿಕ ಎರಡನೇ ಪಟ್ಟಿ ಘೋಷಿಸಿರುವ ಜೆಡಿಯು, ಬಿಹಾರ್‌ ರಾಜ್ಯದ ಉಳಿದ 32 ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದೆ.

ನಿರ್ಮಾಪಕ ಪ್ರಕಾಶ್‌ ಝಾ ಅವರು ಪಶ್ಚಿಮ ಚಂಪಾರಣ್ಯ ಕ್ಷೇತ್ರದಿಂದ ಅದೃಷ್ಟ ಪರೀಕ್ಷಿಸಲಿದ್ದಾರೆ. ಅಮರಪಾಲಿ ಕೈಗಾರಿಕಾ ಸಮೂಹದ ಚೇರ್‌ಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಅನಿಲ್‌ ಕುಮಾರ್‌ ಅವರು ಜೆಹನಾಬಾದ್‌ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಪಕ್ಷದ ಅಧ್ಯಕ್ಷ ಶರದ್‌ ಯಾದವ್‌ ಅವರು ಮಧೆಪುರಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಪಕ್ಷದ ಎಲ್ಲಾ ಹಾಲಿ ಸಂಸದರಿಗೆ ಜೆಡಿಯು ಟಿಕೆಟ್‌ ನೀಡಿದ್ದು, ರಂಜನ್ ಪ್ರಸಾದ್‌ ಯಾದವ್‌ ಅವರು ಪಾಟಲೀಪುತ್ರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಶರದ್‌ ಯಾದವ್‌ ಅವರು ರಾಷ್ಟ್ರೀಯ ಲೋಕದಳ ಪಕ್ಷದ ಅಭ್ಯರ್ಥಿ ಪಪ್ಪು ಯಾದವ್‌ ವಿರುದ್ಧ ಕಣಕ್ಕಿಳಿಯಲಿದ್ದಾರೆ. ರಾಮ್‌ ಸುಂದರ್ ದಾಸ್‌ ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ರಾಮ್‌ ವಿಲಾಸ್‌ ಪಾಸ್ವಾನ್‌ ವಿರುದ್ಧ ಸ್ಪರ್ಧಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.