ಪ್ರಕಾಶ್: ಎನ್‌ಆರ್‌ಐ ಫೋರಂ ಉಪಾಧ್ಯಕ್ಷ

7

ಪ್ರಕಾಶ್: ಎನ್‌ಆರ್‌ಐ ಫೋರಂ ಉಪಾಧ್ಯಕ್ಷ

Published:
Updated:

ಬೆಂಗಳೂರು: ಅನಿವಾಸಿ ಭಾರತೀಯರ ಫೋರಂ ಉಪಾಧ್ಯಕ್ಷರಾಗಿ ವಿ.ಸಿ. ಪ್ರಕಾಶ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಈ ವಿಷಯವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜಿನೀಶ್ ಖಚಿತಪಡಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಎಂಜಿನಿಯರ್ ವೃತ್ತಿಯಲ್ಲಿದ್ದ ಅವರು ಮೂರು ವರ್ಷಗಳ ಹಿಂದೆ ರಾಜ್ಯಕ್ಕೆ ವಾಪಸ್ಸಾಗಿದ್ದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಆತ್ಮೀಯರು ಕೂಡ.`ಆಸ್ಟ್ರೇಲಿಯಾ ಪ್ರಕಾಶ್' ಎಂದೇ ಕಾಂಗ್ರೆಸ್‌ನಲ್ಲಿ ಪ್ರಸಿದ್ಧಿ. ಚುನಾವಣೆ ಸಂದರ್ಭದಲ್ಲೂ ಅಧ್ಯಕ್ಷರಿಗೆ ನೆರವಾಗಿದ್ದರು.

ತುಮಕೂರು ಮೂಲದವರಾದ ಪ್ರಕಾಶ್ ಅವರು ಹುಟ್ಟಿ- ಬೆಳೆದಿದ್ದು ಬೆಂಗಳೂರಿನಲ್ಲಿ.ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಮತ್ತು ಸರ್ಕಾರದ ಜತೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಲು ಹಿಂದಿನ ಸರ್ಕಾರ ಅನಿವಾಸಿ ಭಾರತೀಯರ ಸಮಿತಿಯನ್ನು ರಚಿಸಿತ್ತು. ಮುಖ್ಯಮಂತ್ರಿ ಇದರ ಅಧ್ಯಕ್ಷರು.ಪ್ರಕಾಶ್ ಅವರಿಗೆ ವಿಕಾಸಸೌಧದಲ್ಲಿ ಕೊಠಡಿಯನ್ನು ಹಂಚಿಕೆ ಮಾಡಿದ್ದು, ಸದ್ಯದಲ್ಲೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry