ಪ್ರಕೃತಿಯಂತೆ ನಿಸ್ವಾರ್ಥತೆ ಇರಲಿ

ಭಾನುವಾರ, ಜೂಲೈ 21, 2019
26 °C

ಪ್ರಕೃತಿಯಂತೆ ನಿಸ್ವಾರ್ಥತೆ ಇರಲಿ

Published:
Updated:

ದಾವಣಗೆರೆ: ಪ್ರಕೃತಿ ನಿಸ್ವಾರ್ಥವಾದುದು. ಮನುಷ್ಯನ ಬದುಕು ಸಹ ನಿಸ್ವಾರ್ಥತೆಯಿಂದ ಕೂಡಿರಬೇಕು ಎಂದು ಎಂದು ವಿಜಾಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ನಗರದ ಬಾಪೂಜಿ ಸಭಾಂಗಣದಲ್ಲಿ ಶಿವಾನಂದ ಗುರೂಜಿ ಅವರ ಹಿರಿಯ ವಿದ್ಯಾರ್ಥಿಗಳ ಮತ್ತು ಹಿತೈಷಿಗಳ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಮನುಷ್ಯನ ಜೀವನ ಅಮೂಲ್ಯವಾದುದು. ಅದು ಎಲ್ಲದಕ್ಕಿಂತ ಬಹು ಪ್ರಾಮುಖ್ಯತೆ ಪಡೆದಿದೆ. ನಿಸರ್ಗ ಯಾವುದೇ ಪ್ರತಿಫಲ ಅಪೇಕ್ಷೆಯಿಲ್ಲದೆ ತನ್ನ ಕಾಯಕ ಮಾಡುತ್ತದೆ. ಜನರು ತಮ್ಮ ಜೀವನದಲ್ಲಿ ನಿಸ್ವಾರ್ಥ ಭಾವನೆ ಹೊಂದುವುದು ಮುಖ್ಯ. ಅಲ್ಲದೇ, ಜೀವನದಲ್ಲಿ ಸತ್ಯ, ಪ್ರಾಮಾಣಿಕತೆ ಹೊಂದಿದವರು ಯಾವುದಕ್ಕೂ ಅಂಜುವ ಅಗತ್ಯವಿಲ್ಲ ಎಂದರು.

ಗುರುವಂದನೆ ಸ್ವೀಕರಿಸಿ ಮಾತನಾಡಿದ ಶಿವಾನಂದ ಸ್ವಾಮೀಜಿ ಅವರು, ಶಿಕ್ಷಕರು ದೇಶವನ್ನು ಬದಲಿಸಬಲ್ಲರು ಎಂದರು.

ತನು-ಮನ-ಧನ ಅರ್ಪಿಸಿ ಕಾಯಕ ಮಾಡಬೇಕು. ಸರ್ಕಾರದ ಯಾವ ಕಾನೂನು ಮಾಡದಂತ ಪರಿವರ್ತನೆ ಶಿಕ್ಷಕ ಸಮುದಾಯದಿಂದ ಮಾತ್ರ ಸಾಧ್ಯವಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ತನು-ಮನ-ಧನ ಅರ್ಪಿಸಿ ಕಾಯಕ ಮಾಡಬೇಕು ಎಂದು ಕರೆ ನೀಡಿದರು.

ವೀರಭದ್ರಪ್ಪ ದೇವಿಗೆರೆ ಮಾತನಾಡಿ, ಶಿವಾನಂದ ಸ್ವಾಮೀಜಿ ಅವರು ಸಹಸ್ರ ವಿದ್ಯಾರ್ಥಿಗಳಿಗೆ ಪಠ್ಯ ಬೋಧಿಸುವುದರ ಜತೆಗೆ ಸಂಸ್ಕಾರ ನೀಡಿದರು ಎಂದರು.

ಗಿರಿರಾಜ್, ಪ್ರೊ.ಸಿದ್ದಣ್ಣ ಲಂಗೋಟಿ, ಸುಮಂಗಲಾ ದೇವಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry