ಪ್ರಕೃತಿ ಚಿಕಿತ್ಸೆ: ಇಂದು ಬೆಂಗಳೂರಿಗೆ ಅಣ್ಣಾ

7

ಪ್ರಕೃತಿ ಚಿಕಿತ್ಸೆ: ಇಂದು ಬೆಂಗಳೂರಿಗೆ ಅಣ್ಣಾ

Published:
Updated:

ನವದೆಹಲಿ (ಪಿಟಿಐ): ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಪ್ರಕೃತಿ ಚಿಕಿತ್ಸೆಗಾಗಿ ಗುರುವಾರ ಬೆಂಗಳೂರಿಗೆ ತೆರಳಲಿದ್ದಾರೆ.ಗುಡಗಾಂವ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ಚಿಕಿತ್ಸೆ ಪಡೆದಿರುವ 74 ವರ್ಷದ ಅಣ್ಣಾ, ನವದೆಹಲಿಯಿಂದ ವಿಮಾನದ ಮೂಲಕ ಬೆಳಿಗ್ಗೆ ಬೆಂಗಳೂರು ತಲುಪಿ ಜಿಂದಾಲ್ ಪ್ರಕೃತಿ ಚಿಕಿತ್ಸಾ ಸಂಸ್ಥೆಯಲ್ಲಿ ದಾಖಲಾಗಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.`ಶೀಘ್ರವೇ ನನ್ನ ಆರೋಗ್ಯ ಸುಧಾರಣೆಯಾಗಲಿದ್ದು, ನಂತರ ದೇಶವ್ಯಾಪಿ ಪ್ರವಾಸ ಕೈಗೊಳ್ಳುವೆ~ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry