ಪ್ರಕೃತಿ ವಿಕೋಪ ಸಹಾಯವಾಣಿ ಕೇಂದ್ರ ಕಾರ್ಯಾರಂಭ

ಶನಿವಾರ, ಜೂಲೈ 20, 2019
28 °C

ಪ್ರಕೃತಿ ವಿಕೋಪ ಸಹಾಯವಾಣಿ ಕೇಂದ್ರ ಕಾರ್ಯಾರಂಭ

Published:
Updated:

ಶಿವಮೊಗ್ಗ: ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಮಳೆ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಭಾರಿ ಮಳೆ ಬೀಳಬಹುದಾದ ಸಂಭವ ಇರುವುದದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತುರ್ತಾಗಿ ಕಾರ್ಯನಿರ್ವಹಿಸಲು ಜಿಲ್ಲೆಯ ಎರಡು ಉಪ ವಿಭಾಗಾಧಿ ಕಾರಿಗಳ ಕಚೇರಿ ಸೇರಿದಂತೆ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸಹಾಯ ವಾಣಿ ಕೇಂದ್ರ ಆರಂಭಿಸಿಲಾಗಿದೆ.ಈ ಸಹಾಯವಾಣಿ ಕೇಂದ್ರವು ಸರ್ಕಾರಿ ರಜಾದಿನವನ್ನು ಒಳಗೊಂಡು ಪ್ರತಿದಿನ ರಾತ್ರಿ 8ಗಂಟೆಯಿಂದ ಬೆಳಗಿನ 8ಗಂಟೆಯವರೆಗೆ ಕಾರ್ಯ ನಿರ್ವಹಿಸಲಿದೆ.ಸಾರ್ವಜನಿಕರು ಪ್ರಕೃತಿ ವಿಕೋಪ, ನೆರೆ ಹಾವಳಿ ಇತ್ಯಾದಿಗಳಿಂದ ಉಂಟಾಗುವ ಸಮಸ್ಯೆಗಳ ಪರಿಹಾರ ಕ್ಕಾಗಿ ಸಹಾಯವಾಣಿ ಕೇಂದ್ರಕ್ಕೆ ದೂರವಾಣಿ ಕರೆ ಮಾಡಿ ದೂರು ದಾಖಲಿಸಿ ಪರಿಹಾರ ಕಾರ್ಯಕ್ಕೆ ನೆರವಾಗಬಹುದು.ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ದೂರವಾಣಿ 08182- 271101, 1077, ಉಪ ವಿಭಾ ಗಾಧಿಕಾರಿಗಳ ಕಚೇರಿ -222204, ಉಪ ವಿಭಾಗಾಧಿಕಾರಿಗಳ ಕಚೇರಿ ಸಾಗರ-08183-226601, ತಹಶೀಲ್ದಾರ್ ಶಿವಮೊಗ್ಗ- 08182-279312, ಭದ್ರಾವತಿ ತಹಶೀಲ್ದಾರ್-08282- 267283, ತೀರ್ಥಹಳ್ಳಿ ತಹಶೀಲ್ದಾರ್-08181- 228239, ಸಾಗರ ತಹಶೀಲ್ದಾರ್-08183- 226074, ಸೊರಬ ತಹಶೀಲ್ದಾರ್-08184- 272241, ಶಿಕಾರಿಪುರ ತಹಶೀಲ್ದಾರ್-08187-222239 ಹಾಗೂ ಹೊಸನಗರ ತಹಶೀಲ್ದಾರ್-08185-221239 ಸಂಪರ್ಕಿ ಸಬಹುದು.ಪ್ರಕೃತಿ ವಿಕೋಪ ನಿರ್ವಹಣೆ ಯೋಜನೆಯಡಿ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರ ಶಾಖೆಯ ಕಾರ್ಯಾ ಲಯದಲ್ಲಿ ಪ್ರತ್ಯೇಕ ದೂರವಾಣಿ ಸಂಪರ್ಕ ಅಳವಡಿಸಲಾಗಿದೆ.ದೂವಾಣಿ ಸಂಪರ್ಕ ಸಂಖ್ಯೆ 1077 ಮತ್ತು 08182- 27110 1ಆಗಿದ್ದು, ದಿನದ 24ಗಂಟೆಯೂ ಕಾರ್ಯನಿರ್ವಹಿಸುವ ಈ ಕೇಂದ್ರದಲ್ಲಿ ದೂರವಾಣಿ ಕರೆಗಳ ಸೂಕ್ತ ನಿರ್ವಹ ಞಣೆಗಾಗಿ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry