ಶನಿವಾರ, ಮೇ 28, 2022
29 °C

`ಪ್ರಕೃತಿ ಸಂಪನ್ಮೂಲ ರಕ್ಷಣೆಗೆ ಒತ್ತು ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: `ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಕ್ರಿಯೆ ಜೊತೆಗೆ ಸುತ್ತಮುತ್ತಲಿನ ಪ್ರಕೃತಿ ಸಂಪನ್ಮೂಲ ರಕ್ಷಣೆಗೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ' ಎಂದು ತಾಲ್ಲೂಕು ಸೇವಾದಲದ ಪ್ರಧಾನ ಕಾರ್ಯದರ್ಶಿ ಶಿವರಾಮಯ್ಯ ಅಭಿಪ್ರಾಯಪಟ್ಟರು.ದೇವನಹಳ್ಳಿ ಗುರುಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಭಾರತ ಸೇವಾದಲ ವತಿಯಿಂದ ಏರ್ಪಡಿಸಿದ್ದ ಶಿಕ್ಷಕರ ಮಿಲಾಪ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಇತ್ತೀಚೆಗೆ ಶಾಲೆಗಳಲ್ಲಿ ಶಿಸ್ತು ಕಡಿಮೆಯಾಗುತ್ತಿದೆ. ವಿದ್ಯಾರ್ಥಿ ಮತ್ತು ಶಿಕ್ಷಕರಲ್ಲಿ ಶಿಸ್ತು ಮತ್ತು ಸಮಯದ ಬಗ್ಗೆ ಎಚ್ಚರ ಅಗತ್ಯ. ಶಿಕ್ಷಕರು ನಿಷ್ಠೆಯಿಂದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು ' ಎಂದು ಸಲಹೆ ನೀಡಿದರು.

`ಭಾರತ ಸೇವಾದಲದ ಕಾರ್ಯ ಚಟುವಟಿಕೆ ನಿರಂತರವಾಗಬೇಕು. ಇದರ ಬಗ್ಗೆ ಜಿಲ್ಲಾ ಸಮಿತಿ ಹೆಚ್ಚಿನ ಜವಾಬ್ದಾರಿ ವಹಿಸಬೇಕು' ಎಂದರು.ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಸೇವಾದಲ ಸದಸ್ಯ ಬಿ.ಕೆ.ಶಿವಪ್ಪ ಮಾತನಾಡಿ, `ಪ್ರತಿಯೊಬ್ಬರೂ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಮಾಜದಲ್ಲಿ ಏಕತೆ, ಸ್ವಾಭಿಮಾನ ಕಡಿಮೆಯಾಗುತ್ತಿದೆ. ಸರಣಿಯೋಪಾದಿಯಲ್ಲಿ ಸಂಭವಿಸುತ್ತಿರುವ ಪ್ರಕೃತಿ ವಿಪತ್ತುಗಳಿಂದ ಮನುಕುಲ ನಲುಗಿ ಹೋಗಿದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಬೇಕಾಗಿದೆ.ಪರಿಸರ, ಜೀವಜಲ ಶುಚಿತ್ವ, ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಜವಾಬ್ದಾರಿ ಗುರುತರವಾಗಿದೆ' ಎಂದರು.ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಆರ್.ರವಿಕುಮಾರ್, ಶಿಕ್ಷಣ ಸಂಯೋಜಕ ರವಿಪ್ರಕಾಶ್ ಮಾತನಾಡಿದರು.

ಭಾರತ ಸೇವಾದಲ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕೃಷಿ ಸಮಾಜದ ಅಧ್ಯಕ್ಷ  ಶ್ರಿನಿವಾಸಗೌಡ, ಸೇವಾದಲ ಖಜಾಂಚಿ ತಿಮ್ಮರಾಯಪ್ಪ, ಜಿಲ್ಲಾ ಸೇವಾದಲ ಕಾರ್ಯದರ್ಶಿ ಮದನ ಗೋಪಾಲ್, ಸೇವಾದಲ ವಿಭಾಗಿಯ ಅಧಿಕಾರಿ ಬೋರಯ್ಯ, ಸದಸ್ಯ ಡಾ.ವೆಂಕಟರಾಜು, ಗೀತಾ ಹಾದಿಮನಿ, ಮುನಿಯಪ್ಪ, ಸಂಘಟಕ ಪುಟ್ಟಸ್ವಾಮಿ ಇದ್ದರು.ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತೆ ಸೂರ್ಯಕಲಾ ಹಾಗೂ ವರ್ಗಾವಣೆಗೊಂಡ ದೈಹಿಕ ಶಿಕ್ಷಣ ಶಿಕ್ಷಕಿ ಕೃಷ್ಣಮ್ಮ ಅವರನ್ನು ಸೇವಾದಲ ವತಿಯಿಂದ ಸನ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.