ಗುರುವಾರ , ಏಪ್ರಿಲ್ 22, 2021
29 °C

ಪ್ರಗತಿಗೆ ಬೇಕು ಶಿಕ್ಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ:  `ಹಿಂದುಳಿದ ವರ್ಗದ ಜನರು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಸಂಘಟಿತರಾಗುವುದು ಅಗತ್ಯ. ಜತೆಗೆ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು~ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.ಪಟ್ಟಣದ ಶಿವಾನಂದ ಕಾಲೊನಿಯಲ್ಲಿ ತಾಲ್ಲೂಕು ಗಂಗಾಮತಸ್ಥ ಸಮಾಜದವರು ನಿರ್ಮಿಸಿರುವ ಸಮುದಾಯ ಭವನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ಹಿಂದುಳಿದ ವರ್ಗಗಳವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿದಾಗ ಮಾತ್ರ ಆ ಸಮುದಾಯ ಸಮಾಜದ ಮುಖ್ಯವಾಹಿನಿಯಲ್ಲಿ ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲೂ ಚಿಂತನೆಗಳು ಆಗಬೇಕು.

 

ಗಂಗಾಮತಸ್ಥರ ಸಮುದಾಯ ಭವನ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ. ಈ ಸಮುದಾಯ ಭವನ ನಿರ್ಮಾಣದ ಹಿಂದೆ ಸಮಾಜ ಬಾಂಧವರ ಶ್ರಮ ಸಾಕಷ್ಟಿದೆ. ಸಮುದಾಯದ ಅಭಿವೃದ್ಧಿಗೆ ಇದು ಪೂರಕವಾಗಲಿ~ಎಂದು ಶುಭ ಹಾರೈಸಿದರು.ವಿಜಾಪುರ ಜಿಲ್ಲೆ ಸಿಂದಗಿಯ ಗುರುದೇವ ಆಶ್ರಮದ ಶಾಂತಗಂಗಾಧರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಕೆ.ಎಂ.ಶಿವಲಿಂಗೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಮುದಾಯ ಭವನಕ್ಕಾಗಿ ನಿವೇಶನ ದಾನವಾಗಿ ನೀಡಿದ್ದ ಡಾ.ಎ.ಕೆ.ಕೆಂಚಪ್ಪ ಅವರನ್ನು ಕುಮಾರಸ್ವಾಮಿ ಹಾಗೂ ತಾಲ್ಲೂಕು ಗಂಗಾಮತಸ್ಥರ ಅಧ್ಯಕ್ಷ ವೈ.ಡಿ. ಕೇಶವಮೂರ್ತಿ ಅವರು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು. ಉಪನ್ಯಾಸಕ ಎಚ್.ಎಸ್.ಮಲ್ಲೇಗೌಡ, ಜೆ.ಶ್ರೀನಿವಾಸನ್ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಉಪಾಧ್ಯಕ್ಷ ಬಿಳಿಚೌಡಯ್ಯ, ಪುರಸಭಾ ಅಧ್ಯಕ್ಷ ಜಿ.ಟಿ ಗಣೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸಿದ್ದಾಭೋವಿ, ಉಪಾಧ್ಯಕ್ಷೆ ವಸಂತಾ ಹೊನ್ನಪ್ಪ, ಸದಸ್ಯರಾದ ಮನಕತ್ತೂರು ಲಕ್ಷ್ಮಣ, ಹಾರನಹಳ್ಳಿ ಶಿವಮೂರ್ತಿ, ಗೀಜೀಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೈ.ಆರ್. ನಾಗರಾಜ್ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.