`ಪ್ರಗತಿಪರ ಸಮಾಜಕ್ಕೆ ಬಸವ ತತ್ವ ಸಹಕಾರಿ'

7

`ಪ್ರಗತಿಪರ ಸಮಾಜಕ್ಕೆ ಬಸವ ತತ್ವ ಸಹಕಾರಿ'

Published:
Updated:
`ಪ್ರಗತಿಪರ ಸಮಾಜಕ್ಕೆ ಬಸವ ತತ್ವ ಸಹಕಾರಿ'

ಬೆಂಗಳೂರು: ವಚನಗಳ ಸಾರವನ್ನು ಜಗತ್ತಿಗೆ ಸಾದರಪಡಿಸಲು ವಚನ ಸಂಪುಟವನ್ನು ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮರಾಠಿ, ಪಂಜಾಬಿ, ಬೆಂಗಾಲಿ, ಸಂಸ್ಕೃತ, ಉರ್ದು ಸೇರಿದಂತೆ ಹತ್ತು ಭಾಷೆಗಳಿಗೆ ಅನುವಾದ ಮಾಡಲಾಗಿದೆ.

ಈ ವಚನ ಸಂಪುಟವನ್ನು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಗುರುವಾರ ಬಿಡುಗಡೆ ಮಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಸವ ಸಮಿತಿಯ ಸಹಯೋಗದೊಂದಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ನಡೆದ ಬಿ.ಡಿ.ಜತ್ತಿ ಅವರ ಶತಮಾನೋತ್ಸವ ಸಮಾರಂಭದಲ್ಲಿ ವಚನ ಸಂಪುಟ ಬಿಡುಗಡೆ ಮಾಡಿ ಮಾತನಾಡಿದ ಅವರು, `ಸಾಮಾಜಿಕ ಪ್ರಜ್ಞೆ ಮತ್ತು ಸರ್ವಧರ್ಮ ಸಮನ್ವಯದ ಮೂಲಕ ಜಾಗತಿಕ ಸಂದೇಶವನ್ನು ನೀಡಿದ ಬಸವಣ್ಣನ ತತ್ವಗಳು ಪ್ರಗತಿಪರ ಸಮಾಜವನ್ನು ಮುನ್ನಡೆಸಲು ಸಹಕಾರಿ' ಎಂದು ಅಭಿಪ್ರಾಯಪಟ್ಟರು.`ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಅಸ್ಪೃಶ್ಯತೆಗೆ ವಚನದ ಮೂಲಕ ಚಿಕಿತ್ಸೆ ನೀಡಲು ಬಯಸಿದ್ದ ಬಸವಣ್ಣ, ಈ ನೆಲ ಕಂಡ ಬಹುದೊಡ್ಡ ಸಮಾಜ ಸುಧಾರಕರು. ಎಲ್ಲ ಜಾತಿ ಮತ್ತು ವರ್ಗದವರನ್ನು ಒಟ್ಟುಗೂಡಿಸಿ ಅನುಭವ ಮಂಟಪದ ಮೂಲಕ ಜಾತ್ಯತೀತ ಮನೋಭಾವವನ್ನು ಮೆರೆದವರು' ಎಂದು ಶ್ಲಾಘಿಸಿದರು.ಸಚಿವ ಗೋವಿಂದ ಎಂ. ಕಾರಜೋಳ, ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಮಾತನಾಡಿದರು. ಈ ವಚನ ಸಂಪುಟದಲ್ಲಿ 173 ಶರಣರ ಒಟ್ಟು 2,500 ವಚನಗಳಿವೆ.  ವಚನ ಸಂಪುಟದ ಬಹುಭಾಷಾ ಪ್ರಕಟಣೆಯ ಯೋಜನಾ ನಿರ್ದೇಶಕರಾದ ಹಿರಿಯ ವಿದ್ವಾಂಸ ಡಾ.ಎಂ.ಎಂ. ಕಲ್ಬುರ್ಗಿ, ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಸವರಾಜು  ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry