ಪ್ರಗತಿಯತ್ತ ದಾಪುಗಾಲು: ‘ಬಿಒಎಂ’

7

ಪ್ರಗತಿಯತ್ತ ದಾಪುಗಾಲು: ‘ಬಿಒಎಂ’

Published:
Updated:

ಬೆಂಗಳೂರು: ಸಣ್ಣ ಬ್ಯಾಂಕ್‌ ಎನಿಸಿ ಕೊಂಡಿದ್ದ ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಇತ್ತೀಚಿನ ವರ್ಷಗಳಲ್ಲಿ ಕ್ಷಿಪ್ರಗತಿ ಬೆಳವ ಣಿಗೆ ಕಾಣುತ್ತಾ ಮಧ್ಯಮ ಪ್ರಮಾಣದ ಬ್ಯಾಂಕ್‌ ಆಗಿ ಅಭಿವೃದ್ಧಿ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆಗಲೇ ರೂ2 ಲಕ್ಷ ಕೋಟಿ ವಹಿವಾಟು ನಡೆಸಿದ್ದು, ಪ್ರಗತಿ ಹಾದಿಯಲ್ಲಿ ದಾಪುಗಾಲಿಟ್ಟಿದೆ ಎಂದು ಬ್ಯಾಂಕ್‌ನ ನೂತನ ಅಧ್ಯಕ್ಷ ಸುಶೀಲ್‌ ಮುನೋತ್‌ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ ಸರ್ಕಾರದ ಒಡೆತನದ ಬ್ಯಾಂಕ್‌ ಮೊದಲಿಗೆ ಮಹಾ ರಾಷ್ಟ್ರದಲ್ಲಷ್ಟೇ ಗಮನ ಕೇಂದ್ರೀಕರಿಸಿತ್ತು. ಈಗ 28 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 1873 ಶಾಖೆ ಹೊಂದಿದೆ. ಮಾರ್ಚ್ ವೇಳೆಗೆ 200 ಶಾಖೆ ಆರಂಭಿಸಲಾಗು ತ್ತಿದೆ. ಕರ್ನಾಟಕದಲ್ಲಿ ಎರಡು ಹೊಸ ಶಾಖೆ ತೆರೆದು ಸಂಖ್ಯೆಯನ್ನು 65 ಶಾಖೆ ಗಳಿಗೆ ಹೆಚ್ಚಿಸಲಾಗುವುದು ಎಂದರು.ರಿಟೇಲ್‌ ಸಾಲ ವಿಭಾಗದಲ್ಲಿ ರೂ11,000 ಕೋಟಿ ಸಾಲ ವಿತರಿಸಿ ಶೇ 11ರಷ್ಟು ಪ್ರಗತಿ ಸಾಧಿಸಲಾಗಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ ಶೇ 15ರ ಸಾಧನೆ ನಿರೀಕ್ಷೆ ಇದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ವಲಯಕ್ಕೂ ರೂ16,000 ಕೋಟಿ ಸಾಲ ನೀಡಿದ್ದು, ಶೇ 16ರಷ್ಟು ವೃದ್ಧಿ ಕಂಡುಬಂದಿದೆ. ಭವಿಷ್ಯ ದಲ್ಲಿ ಶೇ 20ರಷ್ಟು ಸಾಧನೆಯ ಗುರಿ ಇಟ್ಟುಕೊಳ್ಳಲಾಗಿದೆ. ಒಟ್ಟು ವಸೂಲಾ ಗದ ಸಾಲ ಪ್ರಮಾಣವನ್ನು (ಜಿಎನ್‌ ಪಿಎ) ಸದ್ಯದ ಶೇ 2.77ರಿಂದ ಶೇ 2ಕ್ಕೆ ತಗ್ಗಿಸುವ ವಿಶ್ವಾಸವಿದೆ ಎಂದರು.ಹೊಸ ಸೇವಾ ವಿಭಾಗಗಳತ್ತ ದೃಷ್ಟಿ ಹರಿಸಿದ್ದು, ಏಪ್ರಿಲ್‌ ನಂತರ ಪ್ರಗತಿಯ ನಡೆ ಚುರುಕಾಗಲಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry