`ಪ್ರಗತಿ ಅಪಾರ್ಟ್‌ಮೆಂಟ್' ಇಂದು ಉದ್ಘಾಟನೆ

7

`ಪ್ರಗತಿ ಅಪಾರ್ಟ್‌ಮೆಂಟ್' ಇಂದು ಉದ್ಘಾಟನೆ

Published:
Updated:
`ಪ್ರಗತಿ ಅಪಾರ್ಟ್‌ಮೆಂಟ್' ಇಂದು ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಮಿತ್ತಬೈಲ್‌ನ ಬಿ.ಎಲ್.ಡೆವಲಪರ್ಸ್‌ ವತಿಯಿಂದ ಅನಿವಾಸಿ ಭಾರತೀಯ ಉದ್ಯಮಿ, ಮ್ಯೋಕ್ಸೆಲ್ ಇಂಟರ್ ನ್ಯಾಶನಲ್ ಎಲ್.ಎಲ್.ಸಿ ಇದರ ಬಾಲಚಂದ್ರ ಪಿ. ನಾಯಕ್ ಹುಟ್ಟೂರು ಮಿತ್ತಬೈಲಿನಲ್ಲಿ ನಿರ್ಮಿಸಿರುವ ಪ್ರಗತಿ ಅಪಾರ್ಟ್‌ಮೆಂಟ್ ಅನ್ನು ಅವರ ತಾಯಿ ರೋಹಿಣಿ ಪುರುಷೋತ್ತಮ ನಾಯಕ್ ಬುಧವಾರ  ಮಧ್ಯಾಹ್ನ 12.45ಕ್ಕೆ ಉದ್ಘಾಟಿಸುವರು.11 ಸಾವಿರ ಚದರ ಅಡಿ ವ್ಯಾಪ್ತಿಯ ಈ ಬಹು ಮಹಡಿಯ ಆಪಾರ್ಟ್‌ಮೆಂಟ್‌ನಲ್ಲಿ ನಾಲ್ಕು ಅಂತಸ್ತುಗಳಿವೆ. ಒಟ್ಟು 14 ಫ್ಲ್ಯಾಟ್‌ಗಳ ಸಹಿತ ಸಿಂಡಿಕೇಟ್ ಬ್ಯಾಂಕ್ ಈ ನೂತನ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದೆ.ಸಂಜೆ ಶಾಸಕ ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಪಾಲಡ್ಕ ಚರ್ಚ್‌ನ ರೆ.ಫಾ. ಗಿಲ್ಬರ್ಟ್ ಡಿ.ಸೋಜ, ಚಿತ್ರ ನಟ ಟೆನ್ನಿಸ್ ಕೃಷ್ಣ, ಚೌಟರ ಅರಮನೆಯ ಕುಲದೀಪ್ ಎಂ, ಸುನಿಲ್ ಕೀರ್ತಿ, ನವಮಿ ಗ್ರೂಪ್‌ನ ನಂದ ಕುಮಾರ ಆರ್. ಕುಡ್ವಾ, ಹೊಸನಾಡು ಕೊಡ್ಯಡ್ಕ ಅನ್ನಪೂರ್ಣೇಶ್ವರೀ ದೇವಸ್ಥಾನದ ಮೊಕ್ತೇಸರ ಜಯರಾಮ ಹೆಗ್ಡೆ, ವೆಂಕಟರಮಣ ಮತ್ತು ಹನುಮಂತ ದೇವಸ್ಥಾನದ ಮೊಕ್ತೇಸರ ಜಿ.ಉಮೇಶ ಪೈ, ಪಾಲಡ್ಕ ಚರ್ಚ್ ಅಧ್ಯಕ್ಷ ಆ್ಯಂಡ್ರ್ಯೂ ಡಿಸೋಜ,  ಎಂ ಶೀನಪ್ಪ, ಕಡಂದಲೆಗುತ್ತು ಸುದರ್ಶನ ಶೆಟ್ಟಿ ಅತಿಥಿಗಳಾಗಿ ಭಾಗವಹಿಸುವರು ಎಂದು ಎಪಿಎಂಸಿ ಮಾಜಿ ಸದಸ್ಯ ಮಿತ್ತಬೈಲು ವಾಸುದೇವ ನಾಯ್ಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry