ಮಂಗಳವಾರ, ಏಪ್ರಿಲ್ 20, 2021
32 °C

ಪ್ರಚಂಡ ಸ್ವಾತಂತ್ರ್ಯ ಯೋಧೆ: ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ಗೆ ಬಚ್ಚನ್ ಶ್ರದ್ಧಾಂಜಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿ ಐ): ~ಪ್ರಚಂಡ ಸ್ವಾತಂತ್ರ್ಯ ಯೋಧೆ~ ಎಂಬುದಾಗಿ ಬಣ್ಣಿಸುವ ಮೂಲಕ ಸೋಮವಾರ ನಿಧನರಾದ ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ಅವರ ನಿಧನಕ್ಕೆ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ~ಟ್ವಿಟ್ಟರ್~ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.97ರ ಹರೆಯದ ಸೆಹಗಲ್ ಅವರು ಕಾನ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.~ಶ್ರೀಮತಿ ಲಕ್ಷ್ಮೀ ಸೆಹಗಲ್ ಅವರು ಕಾನ್ಪುರದಲ್ಲಿ ತಮ್ಮ 97ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ~ಎಂತಹ ಮಹಿಳೆ ಆಕೆ! ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಚಂಡ ಯೋಧೆ..ಅವರ ಆತ್ಮಕ್ಕಾಗಿ ಪ್ರಾರ್ಥನೆಗಳು! ಬ್ರಿಟಿಷ್ ಆಳ್ವಿಕೆಯ ವಿರುದ್ಧ ಸುಭಾಷ್ ಚಂದ್ರ ಬೋಸ್ ಮತ್ತು (ಐಎನ್ ಎಸ್)  ಭಾರತೀಯ ರಾಷ್ಟ್ರೀಯ ಸೇನೆಯ ಜೊತೆಗೆ ಅವರಿದ್ದರು~ ಎಂದು  69ರ ಹರೆಯದ ನಟ ತಮ್ಮ  ಟ್ವಿಟ್ಟರ್ ಸಂದೇಶದಲ್ಲಿ ಬರೆದಿದ್ದಾರೆ.ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಅವರು ತುಂಬಾ ಸಕ್ರಿಯರಾಗಿದ್ದರು. ಬೋಸ್ ಅವರು ಸ್ಥಾಪಿಸಿದ ಭಾರತೀಯ ರಾಷ್ಟ್ರೀಯ ಸೇನೆಯ ರಾಣಿ ಝಾನ್ಸಿ ದಳದ ಮುಖ್ಯಸ್ಥೆಯಾಗಿದ್ದರು. ವೃತ್ತಿಯಿಂದ ವೈದ್ಯರಾಗಿದ್ದ ಅವರು ವೈದ್ಯರಾಗಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿ ದುಡಿದಿದ್ದಾರೆ. 1998ರಲ್ಲಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿತ್ತು~ ಎಂದು ಬಚ್ಚನ್ ಸ್ಮರಿಸಿದ್ದಾರೆ.~ಬಂಟಿ ಔರ್ ಬಬ್ಲಿ~ ಹಾಗೂ ~ಝೂಮ್ ಬರಾಬರ್ ಝೂಮ್~ ಚಿತ್ರಗಳನ್ನು ನಿರ್ದೇಶಿಸಿದ ಶಾದ್ ಅಲಿ ಅವರ ಅಜ್ಜಿಯಾದ ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ಅವರಿಗೆ ಶ್ರದ್ಧಾಂಜಲಿಗಳು ಶಾದ್~ ಎಂದು ಬಚ್ಚನ್ ಶಾದ್ ಅವರನ್ನು ಉದ್ದೇಶಿಸಿ ಬರೆದಿದ್ದಾರೆ.~ನಿನ್ನೆಯಷ್ಟೇ ಶಾದ್ ನನಗೆ ಸೆಹಗಲ್ ಅವರ ಪರಿಸ್ಥಿತಿ ಬಗ್ಗೆ ಎಸ್ ಎಂಎಸ್ ಸಂದೇಶ ಕಳುಹಿಸಿದ್ದರು~ ಎಂದೂ ಅಮಿತಾಭ್ ತಮ್ಮ ಕಿರುಬ್ಲಾಗ್ ನಲ್ಲಿ ಬರೆದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.