ಬುಧವಾರ, ನವೆಂಬರ್ 20, 2019
20 °C

ಪ್ರಚಾರಕ್ಕೆ ಅಡ್ವಾಣಿ, ಮೋದಿ, ಜೇಟ್ಲಿ

Published:
Updated:

ಧಾರವಾಡ: ಭಾರತೀಯ ಜನತಾ ಪಕ್ಷವು ಇದೇ 21 ರಿಂದ ಬಿರುಸಿನ ಪ್ರಚಾರ ನಡೆಸಲಿದೆ. ಪ್ರಚಾರಕ್ಕೆ ಪಕ್ಷದ ಮುಖಂಡರಾದ  ಎಲ್.ಕೆ.ಅಡ್ವಾಣಿ,  ರಾಜನಾಥ ಸಿಂಗ್,  ನರೇಂದ್ರ ಮೋದಿ,  ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಆಗಮಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.`ಮುಖಂಡರು ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಕೆಲವರ ದಿನಾಂಕವಷ್ಟೇ ನಿಗದಿಯಾಗಿದ್ದು, ಎರಡು ದಿನಗಳಲ್ಲಿ ಎಲ್ಲ ಮುಖಂಡರು ಬರುವ ದಿನಾಂಕ   ಖಚಿತವಾಗಲಿದೆ' ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)