ಪ್ರಚಾರ ಇಲ್ಲದ ವಿಜ್ಞಾನ ಪ್ರದರ್ಶನ: ಟೀಕೆ

7

ಪ್ರಚಾರ ಇಲ್ಲದ ವಿಜ್ಞಾನ ಪ್ರದರ್ಶನ: ಟೀಕೆ

Published:
Updated:

ಚಿಕ್ಕಬಳ್ಳಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸರ್ ಎಂ.ವಿ.ಸ್ಮಾರಕ ಶಾಲೆಯಲ್ಲಿ ತಾಲ್ಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸೋಮ ವಾರ ನಡೆಯಲಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಮತ್ತು ಪ್ರಚಾರ ಇಲ್ಲದ ಕಾರಣ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಯಿತು.`ತಾಲ್ಲೂಕು ಮಟ್ಟದಲ್ಲಿ ಇಂತಹ ಒಂದು ವಿಶಿಷ್ಟ ರೀತಿಯ ವಸ್ತುಪ್ರದರ್ಶನ ನಡೆಯಲಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಮಾಧ್ಯಮದಲ್ಲೂ ಇದರ ಬಗ್ಗೆ ಮಾಹಿತಿ ನೀಡಲಾಗಿಲ್ಲ. ಯಾವುದೇ ರೀತಿಯ ಪ್ರಚಾರವನ್ನು ಸಹ ಮಾಡಲಾಗಿಲ್ಲ. ಯಾರಿಗೂ ಹೇಳದೇ ಸಂಕುಚಿತ ಮನೋಭಾವದಿಂದ ವಸ್ತುಪ್ರದರ್ಶನ ನಡೆಸುವುದರಿಂದ ಯಾರಿಗೆ ಪ್ರಯೋಜನ? ವಿದ್ಯಾರ್ಥಿಗಳ ಪ್ರತಿಭೆ ಎಲ್ಲರಿಗೂ ತಿಳಿಯುವುದಾದರೂ ಹೇಗೆ~ ಎಂದು ಅವರು ಅಸಮಧಾನ ವ್ಯಕ್ತಪಡಿಸಿದರು.`ಕ್ಷೇತ್ರ ಶಿಕ್ಷಣಾಧಿಕಾರಿ, ನಗರಸಭೆ ಸದಸ್ಯರು ಮತ್ತು ಶಾಲಾ ಅಡಳಿತ ಮಂಡಳಿ ಪದಾಧಿಕಾರಿಗಳು  ತಮ್ಮ ಪಾಡಿಗೆ ತಾವು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿ, ಪ್ರದರ್ಶನಕ್ಕೆ ಚಾಲನೆ ನೀಡಿದ್ದಾರೆ. ವಿದ್ಯಾರ್ಥಿಗಳನ್ನೇ ಪ್ರೇಕ್ಷಕರನ್ನಾಗಿಸಿಕೊಂಡು ಕಾಟಾಚರದ ಕಾರ್ಯಕ್ರಮಕ್ಕೆ ನಡೆಸಿದಂತೆ ಆಗಿದೆ~ ಎಂದು ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರು ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry