ಶನಿವಾರ, ನವೆಂಬರ್ 23, 2019
18 °C

ಪ್ರಚಾರ ಖರ್ಚಿಗೊಂದು ಪಟ್ಟಿ...

Published:
Updated:

ಬೆಂಗಳೂರು: ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಲಗಾಮು ಹಾಕಿರುವ ಚುನಾವಣಾ ಆಯೋಗ, ಅಭ್ಯರ್ಥಿಗಳು ಚುನಾವಣಾ ಪ್ರಚಾರದ ವೇಳೆ ಯಾವುದಕ್ಕೆ ಎಷ್ಟು ಖರ್ಚು ಮಾಡಬಹುದು ಎಂಬ ಕುರಿತು ಪಟ್ಟಿಯೊಂದನ್ನು ಸಿದ್ಧಪಡಿಸಿದೆ.ಅಭ್ಯರ್ಥಿಗಳು ಪ್ರಚಾರದ ವೇಳೆ ಕಾರ್ಯಕರ್ತರಿಗೆ ನೀಡುವ ಪಕ್ಷದ ಚಿಹ್ನೆ ಇರುವ ಟೋಪಿಗೆ ರೂ 50 ಎಂದು ಆಯೋಗ ನಿಗದಿ ಮಾಡಿದೆ. ಅಭ್ಯರ್ಥಿ ತನ್ನ ಲೆಕ್ಕಪತ್ರದಲ್ಲಿ ನಿಗದಿತ ದರಕ್ಕಿಂತ ಕಡಿಮೆ ನಮೂದಿಸಿದರೂ ಅದನ್ನು ಆಯೋಗ ಮಾನ್ಯ ಮಾಡುವುದಿಲ್ಲ. ಆಯೋಗ ನಿಗದಿಪಡಿಸಿರುವಂತೆ ವೆಚ್ಚವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿದೆ. ಈ ಕುರಿತ ದರ ಪಟ್ಟಿಯನ್ನು ಆಯೋಗ ಬಿಡುಗಡೆ ಮಾಡಿದೆ.ಅಭ್ಯರ್ಥಿಗಳು ಪ್ರಚಾರ ಸಂದರ್ಭದಲ್ಲಿ ಬಳಸುವ ವಸ್ತುಗಳಿಗೆ ದರ ನಿಗದಿ ಮಾಡಿದ್ದು, ಅದನ್ನು ವೆಚ್ಚ ವೀಕ್ಷಕರು ಗಮನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)