ಶನಿವಾರ, ಜೂನ್ 19, 2021
28 °C

ಪ್ರಚಾರ: ಗಂಟೆಗಳ ಲೆಕ್ಕದಲ್ಲಿ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಕಾರ್ಯ­ಕರ್ತರು ಪ್ರಚಾರ ಕಾರ್ಯ ನಡೆಸಲು ಕೋರಿ ಸಲ್ಲಿಸುವ ಅರ್ಜಿ­ಗಳನ್ನು ಆಯಾ ದಿನವೇ ವಿಲೇವಾರಿ ಮಾಡಿ ಗಂಟೆಗಳ ಲೆಕ್ಕದಲ್ಲಿ ಅನುಮತಿ ನೀಡಲಾಗುವುದು ಜಿಲ್ಲಾಧಿಕಾರಿ ಡಿ.ಕೆ.ರವಿ ಹೇಳಿದರು.ತಾಲ್ಲೂಕು ಕೇಂದ್ರಗಳಲ್ಲೂ ಸಹಾಯಕ ಚುನಾವಣಾಧಿಕಾರಿ­ಗಳು ಪ್ರಚಾರ ಕಾರ್ಯಕ್ಕೆ ಅನುಮತಿ ನೀಡುವುದನ್ನು ಅನಗತ್ಯವಾಗಿ ವಿಳಂಬ ಮಾಡಬಾರದು. ಅನಗತ್ಯ ಸಬೂಬುಗಳನ್ನು ಹೇಳಿ ಅರ್ಜಿದಾರರನ್ನು ಸತಾಯಿಸಬಾರದು ಎಂದು  ಸ್ಪಷ್ಟವಾಗಿ ಸೂಚಿಸಿದರು.ಸ್ಪಷ್ಟತೆ ಇರಲಿ:  ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಪ್ರಕರಣಗಳ ಕುರಿತು ಸಹಾಯಕ ಚುನಾವಣಾಧಿಕಾರಿಗಳು ಸ್ಪಷ್ಟ ನಿಲುವನ್ನು ತಾಳಬೇಕು. ಕ್ರಮಕ್ಕೆ ಶಿಫಾರಸು ಮಾಡಿ ನೀಡಲಾಗುವ ಪತ್ರಗಳಲ್ಲಿ ಸ್ಪಷ್ಟತೆ ಇದ್ದರೆ ಶೀಘ್ರ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆಗೆ ಸಾಧ್ಯವಾಗುತ್ತದೆ. ಇಲ್ಲವಾದರೆ ಅನಗತ್ಯ ವಿಳಂಬ, ಗೊಂದಲಗಳು ಏರ್ಪಡುತ್ತವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.