ಪ್ರಜಾಪ್ರಭುತ್ವದಲ್ಲಿ ಹಾದಿ ತಪ್ಪಲು ಅವಕಾಶವಿಲ್ಲ - ರಾಷ್ಟ್ರಪತಿ

7

ಪ್ರಜಾಪ್ರಭುತ್ವದಲ್ಲಿ ಹಾದಿ ತಪ್ಪಲು ಅವಕಾಶವಿಲ್ಲ - ರಾಷ್ಟ್ರಪತಿ

Published:
Updated:
ಪ್ರಜಾಪ್ರಭುತ್ವದಲ್ಲಿ ಹಾದಿ ತಪ್ಪಲು ಅವಕಾಶವಿಲ್ಲ - ರಾಷ್ಟ್ರಪತಿ

ನವದೆಹಲಿ (ಪಿಟಿಐ): ಪರಿಣಾಮಕಾರಿ ಜನಾದೇಶ ಹಾಗೂ ಮಾಧ್ಯಮ ಸ್ಫೋಟಗಳನ್ನು ಒಳಗೊಂಡಂತೆ ಸಂಕೀರ್ಣ ಪರಿಸ್ಥಿತಿಯಲ್ಲಿ ವಿಶ್ವದ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸುತ್ತಿದ್ದು, ಈ ಸಂದರ್ಭದಲ್ಲಿ ಭಾರತದ ಪ್ರಜಾಪ್ರಭುತ್ವವು `ಹಾದಿ ತಪ್ಪಲು ಅವಕಾಶ ನೀಡುವುದಿಲ್ಲ~ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಭಾನುವಾರ ಹೇಳಿದರು.ಸಂಸತ್ತಿನ 60ನೇ ವರ್ಷಾಚರಣೆ ಸಂಭ್ರಮದ ದಿನವಾದ ಭಾನುವಾರ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಏರ್ಪಡಿಸಿದ್ದ ವಿಶೇಷ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು `ಸ್ಪಂದನಾಶೀಲವಾದ ಆರೋಗ್ಯಪೂರ್ಣ ಪ್ರಜಾಪ್ರಭುತ್ವದೆಡೆಗೆ ಸಾಗುವುದೇ ಇಂದಿನ ಪ್ರಜಾಪ್ರಭುತ್ವದ ಮುಂದಿರುವ ದೊಡ್ಡ ಸವಾಲು ಆದರೆ ಇದನ್ನು ಎಚ್ಚರಿಕೆಯಿಂದ ಮುನ್ನಡೆದು ತಲುಪುವ ಅಗತ್ಯವಿದೆ~ ಎಂದು ತಿಳಿಸಿದರು.`ಸರ್ಕಾರಗಳು ಸಮ್ಮಿಶ್ರಗೊಂಡು, ಜನಪ್ರತಿನಿಧಿಗಳು ವಿವಿಧ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ಸ್ಪಷ್ಟ ಜನಾದೇಶ ದೊರೆಯದು, ಆದ್ದರಿಂದ ವಿವಿಧ ನಿರೀಕ್ಷೆಗಳ ನಡುವೆ ಒಂದು ಸಮತೋಲನ ಹುಡುಕುವ ಅಗತ್ಯ ಯಾವಾಗಲೂ ಇದೆ~ ಎಂದರು.`ಚುನಾವಣೆಗಳು ಯಾವುದೇ ಪ್ರಜಾಪ್ರಭುತ್ವದ ಅಡಿಗಲ್ಲುಗಳು, ಆದ್ದರಿಂದ ನಾವು ಚುನಾವಣೆ ಹಾಗೂ ಸಮಾಜದಲ್ಲಿ ನಡೆಯುವ ಭ್ರಷ್ಟಾಚಾರ ಹಾಗೂ ಅಕ್ರಮಗಳನ್ನು ತೆಗೆದು ಹಾಕುವ ಮೂಲಕ ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ~ ಎಂದು ಹೇಳಿದರು.`ಸಂಸತ್ತಿನಲ್ಲಿನ ಚರ್ಚೆಗಳು ಕಠಿಣ ಮತ್ತು ವಿರೋಧಗಳಿಂದ ಕೂಡಿದ್ದರೂ ಕೂಡಾ ಅವುಗಳನ್ನು ಸಂಸದೀಯ ನಡವಳಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಬಗೆಹರಿಸಿಕೊಳ್ಳಬೇಕು~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry