ಪ್ರಜಾವಾಣಿ ಒಲಿಂಪಿಕ್ಸ್ ರಸಪ್ರಶ್ನೆ ಸ್ಪರ್ಧೆ:ವಿಜೇತರಿಗೆ ಬಹುಮಾನ ವಿತರಣೆ

7

ಪ್ರಜಾವಾಣಿ ಒಲಿಂಪಿಕ್ಸ್ ರಸಪ್ರಶ್ನೆ ಸ್ಪರ್ಧೆ:ವಿಜೇತರಿಗೆ ಬಹುಮಾನ ವಿತರಣೆ

Published:
Updated:

ದಾವಣಗೆರೆ: ಲಂಡನ್ `ಒಲಿಂಪಿಕ್ಸ್~ ಸಂದರ್ಭದಲ್ಲಿ `ಪ್ರಜಾವಾಣಿ~ ಮತ್ತು `ಡೆಕ್ಕನ್ ಹೆರಾಲ್ಡ್~ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಹಯೋಗದಲ್ಲಿ ನಡೆಸಿದ `ಒಲಿಂಪಿಕ್ಸ್ ರಸಪ್ರಶ್ನೆ ಸ್ಪರ್ಧೆ~ಯಲ್ಲಿ ವಿಜೇತರಾದ 9 ಮಂದಿಗೆ `ಪ್ರಜಾವಾಣಿ~ ದಾವಣಗೆರೆ ಕಚೇರಿಯಲ್ಲಿ ಶುಕ್ರವಾರ ಬಹುಮಾನ ವಿತರಿಸಲಾಯಿತು.ವಿಜೇತರಿಗೆ `ಪ್ರಜಾವಾಣಿ~ ದಾವಣಗೆರೆ ಬ್ಯೂರೋ ಮುಖ್ಯಸ್ಥ ಎಂ.ಎಸ್. ರಾಜೇಂದ್ರಕುಮಾರ್, ಪ್ರಸರಣ ವಿಭಾಗದ ಸಹಾಯಕ ವ್ಯವಸ್ಥಾಪಕ ಪ್ರಸನ್ನಕುಮಾರ್ ಎಸ್.ಐ. ಹಾಗೂ ಜಾಹೀರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ಕೆ.ಜಿ. ಲೋಕೇಶ್ ಬಹುಮಾನ ವಿತರಣೆ ಮಾಡಿದರು.ದಾವಣಗೆರೆಯ ಎಸ್. ವಸಂತ್ (ಸ್ಪರ್ಧೆ-6) ಅವರಿಗೆ ತೃತೀಯ ಬಹುಮಾನವಾಗಿ ಮೊಬೈಲ್ ವಿತರಿಸಲಾಯಿತು.

ಸಮಾಧಾನಕರ ಬಹುಮಾನ ಪಡೆದವರು: ದಾವಣಗೆರೆ ಹೊಂಡದ ರಸ್ತೆಯ ಬಿ.ಎಸ್. ಕ್ರಾಸ್ ನಿವಾಸಿ  ಕೆ.ಎಸ್. ಮಂಜುನಾಥ್ (ಸ್ಪರ್ಧೆ-1). ದಾವಣಗೆರೆ ಆಂಜನೇಯ ಬಡಾವಣೆ 14ನೇ ಕ್ರಾಸ್‌ನ ಎಸ್.ಎಸ್. ಅಕ್ಷಯ್, ಹರಿಹರದ ಕನಕದಾಸ ನಗರದ 2ನೇ ಮುಖ್ಯರಸ್ತೆ 4ನೇ ಕ್ರಾಸ್‌ನ ಕೆ.ಎಂ. ವಿಭೂತಿ, ದಾವಣಗೆರೆಯ ವಿದ್ಯಾನಗರ 18ನೇ ಕ್ರಾಸ್‌ನ  ಎಸ್.ಬಿ. ಜಯಪ್ರಕಾಶ್ (ಸ್ಪರ್ಧೆ-3) ಅವರಿಗೆ ಬಹುಮಾನವಾಗಿ ವಾಚ್‌ಗಳನ್ನು ವಿತರಿಸಲಾಯಿತು.ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಮದಕರಿ ನಗರದ ಓಬಣ್ಣ, ಚನ್ನಗಿರಿ ತಾಲ್ಲೂಕಿನ ಮರಬನಹಳ್ಳಿಯ ಡಿ.ಎನ್. ಬಸವರಾಜ್ (ಸ್ಪರ್ಧೆ-5). ದಾವಣಗೆರೆ ಹೊಂಡದ ರಸ್ತೆಯ ಬಾಳೆಹೊಲದ ಸಿದ್ದಲಿಂಗಪ್ಪ ಕ್ರಾಸ್‌ನ ಕೆ.ಎಸ್. ಲಿಂಗರಾಜ್, ಹರಪನಹಳ್ಳಿ ಪಟ್ಟಣ ಭಾವಿಹಳ್ಳಿ ರಸ್ತೆಯ ಪಿ. ಅನುರಾಧಾ (ಸ್ಪರ್ಧೆ 6) ಅವರಿಗೆ ಬಹುಮಾನವಾಗಿ ಡಿನ್ನರ್‌ಸೆಟ್‌ಗಳನ್ನು ವಿತರಣೆ ಮಾಡಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry