ಪ್ರಜಾವಾಣಿ ಜನರ ಮುಖವಾಣಿ: ವಿದ್ಯಾರ್ಥಿಗಳ ಗುಣಗಾನ

7

ಪ್ರಜಾವಾಣಿ ಜನರ ಮುಖವಾಣಿ: ವಿದ್ಯಾರ್ಥಿಗಳ ಗುಣಗಾನ

Published:
Updated:

ಸಿಂದಗಿ: `ಪ್ರಜಾವಾಣಿ ಜನರ ಮುಖ ವಾಣಿ,  ಶಬ್ದಕೋಶ,  ಸಮಾಜದ ಕನ್ನಡಿ,  ಜ್ಞಾನ ದಿಗಂತ,  ಹೊಸ ಮನ್ವಂತರಗಳ ಹರಿಕಾರ....~  - ಹೀಗೆಲ್ಲ `ಪ್ರಜಾವಾಣಿ~ ಪತ್ರಿಕೆಯ ಬಗ್ಗೆ ಗುಣಗಾನ ಮಾಡಿದವರು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು.ಸ್ಥಳೀಯ ಶಿವಾನುಭವಮಂಟಪದಲ್ಲಿ ಮಂಗಳವಾರ ರಾಷ್ಟ್ರಕವಿ ಕುವೆಂಪು ಟ್ಯುಟೋರಿಯಲ್ಸ್ ಏರ್ಪಡಿಸಿದ್ದ ಪ್ರಜಾವಾಣಿ ಸಮೀಕ್ಷಾ ಸಪ್ತಾಹದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಪಟ್ಟಣದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು `ಪ್ರಜಾವಾಣಿ~ ಪತ್ರಿಕೆ ಕುರಿತಾಗಿ ಈ ಮೇಲಿನಂತೆ ಅನಿಸಿಕೆ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಬಿರಾದಾರ, ಶೇಖರ ನಾಟೀಕಾರ, ಎಸ್.ಎಸ್.ಬಿರಾದಾರ, ಪೋಲಿಸ್‌ಪಾಟೀಲ, ಆರ್.ಎಸ್.ಸೀಡಿ ಶರಣಬಸವ ಭೈರೆಡ್ಡಿ ಅವರು ಮಾತನಾಡಿ, ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ತಪ್ಪದೇ ಪ್ರಜಾವಾಣಿ ಓದಲೇಬೇಕು ಎಂದರು.`ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ `ಪ್ರಜಾವಾಣಿ~ ಪೂರಕ ಜ್ಞಾನ ಒದಗಿಸಿಕೊಡುತ್ತದೆ. ಕೇವಲ ಒಂದು ವಾರ ಪ್ರಜಾವಾಣಿ ಓದಿದ್ದರಿಂದ ನಮ್ಮನ್ನು ಕಟ್ಟಿ ಹಾಕಿದೆ. ನಿರಂತರವಾಗಿ ಈ ಪತ್ರಿಕೆ ಓದುವುದರಿಂದ ನಿಶ್ಚಿತವಾಗಿಯೂ ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ~ ಎಂದು ಅಭಿಪ್ರಾಯಪಟ್ಟರು.ಪ್ರಜಾವಾಣಿ ಸಮೀಕ್ಷಾ ಸಪ್ತಾಹದಲ್ಲಿ ಪಟ್ಟಣದ ವಿವಿಧ ಪದವಿ ಪೂರ್ವ ಕಾಲೇಜಿನ 104 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ ಮೂವರು ವಿದ್ಯಾಥಿಗಳು ಮಲ್ಲಿಕಾರ್ಜುನ ಬಿರಾದಾರ, ಶೇಖರ ನಾಟೀಕಾರ ಹಾಗೂ ಪ್ರೇಮನಗೌಡ ಕೆರೂರ ಕ್ರಮವಾಗಿ 89, 85 ಹಾಗೂ 80 ಅಂಕಗಳನ್ನು ಪಡೆದುಕೊಂಡು ದಿ ಪ್ರಿಂಟರ್ಸ್‌(ಮೈಸೂರು) ಪ್ರ್ಯೆ. ಲಿಮಿಟೆಡ್ ವತಿಯಿಂದ ಆಕರ್ಷಕ ಬಹುಮಾನ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಈ ವಿದ್ಯಾರ್ಥಿಗಳನ್ನು `ಪ್ರಜಾವಾಣಿ~ ಜಿಲ್ಲಾ ಪ್ರಸರಣ ಪ್ರತಿನಿಧಿ ಶ್ರೀಶೈಲ ಮಣಕವಾಡ ಸನ್ಮಾನಿಸಿದರು. ಶಿಕ್ಷಕ ಕಬೂಲ ಕೊಕಟನೂರ ಮಾತನಾಡಿ, `ಪ್ರಜಾವಾಣಿ ಮನೆ ಮಾತಾಗಿದೆ. ಬುದ್ದಿಗೆ ಒರೆಗಲ್ಲು ಹಚ್ಚುವ ಏಕಮೇವ ಪತ್ರಿಕೆ ಇದಾಗಿದೆ~ ಎಂದರು.  ಸಮಾರಂಭದ ಅಧ್ಯಕ್ಷತೆಯನ್ನು ಟ್ಯುಟೋರಿಯಲ್ಸ್ ಸಂಚಾಲಕ ಮಹೇಶ ದುತ್ತರಗಾಂವಿ ವಹಿಸಿದ್ದರು. ಪ್ರಜಾವಾಣಿ ಬಳಗದ ಶಾಂತೂ ಹಿರೇಮಠ, ನಿಂಗೂ ಯಾಳಗಿ ವೇದಿಕೆಯಲ್ಲಿದ್ದರು. ಎಸ್.ಆರ್.ಬೈರೋಡಗಿ ಸ್ವಾಗತಿಸಿದರು. ಶರಣಬಸವ ಭೈರೆಡ್ಡಿ ನಿರೂಪಿಸಿದರು. ಪಿ.ಎಂ.ಕಕ್ಕೇರಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry