ಶನಿವಾರ, ಮೇ 8, 2021
27 °C

`ಪ್ರಜಾವಾಣಿ' ಸ್ಕಾಲರ್‌ಶಿಪ್ ಪಡೆದವರ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಉನ್ನತ ಶಿಕ್ಷಣಕ್ಕೆ ಅನುಕೂಲ'

`ಪ್ರಜಾವಾಣಿ' ವಿದ್ಯಾರ್ಥಿ ವೇತನವನ್ನು ಧಾರವಾಡದ ಜೆಎಸ್‌ಎಸ್ ಕಾಲೇಜಿಗೆ ಪ್ರವೇಶ ಪಡೆಯಲು ಕಾಲೇಜು ಶುಲ್ಕವಾಗಿ ಬಳಸಿಕೊಂಡು ಪಿಯುಸಿ ಮೊದಲ ವರ್ಷ (ವಿಜ್ಞಾನ) ದಲ್ಲಿ  ಶೇ 75 ಅಂಕಗಳೊಂದಿಗೆ ಪಾಸಾಗಿದ್ದೇನೆ. ಬಡ ವಿದ್ಯಾರ್ಥಿಯಾದ ನಾನು, ನನ್ನ ಶೈಕ್ಷಣಿಕ ಜೀವನವನ್ನು ಯಶಸ್ವಿಯಾಗಿ ಮುಂದುವರಿಸಿದ್ದೇನೆ. ಆಸ್ತಿ, ಜಮೀನು ಇಲ್ಲದ ನನಗೆ ಓದು ಮುಂದುವರಿಸಲು `ಪ್ರಜಾವಾಣಿ' ವಿದ್ಯಾರ್ಥಿ ವೇತನ ತುಂಬಾ ನೆರವಾಗಿದೆ. ಮತ್ತೊಬ್ಬರ ಸಹಾಯವಿಲ್ಲದೆ ಉನ್ನತ ಶಿಕ್ಷಣ ಪಡೆಯಲು ಇದರಿಂದ ನೆರವಾಗಿದೆ. ಮುಂದೆ ಎರೊನಾಟಿಕಲ್ ಎಂಜಿನಿಯರ್ ಆಗುವ ಬಯಕೆ ಇದೆ.



-ಅನಿಕೇತ ಉಂಡಾಳೆ, ತಿಳವಳ್ಳಿ (ಹಾವೇರಿ ಜಿಲ್ಲೆ)-ರಮೇಶ ಸಿದ್ಧಲಿಂಗಪ್ಪ ಗಾಣಿಗೇರ ಎಂ.ಕೆ. ಹುಬ್ಬಳ್ಳಿ (ಬೆಳಗಾವಿ ಜಿಲ್ಲೆ)



ಪ್ರಜಾವಾಣಿ ಪರಿಹಾರ ನಿಧಿ

ಬಡ ವಿದ್ಯಾರ್ಥಿಗಳಿಗೆ ನೆರವಾಗಿರಿ ಉದಾರ ಕೊಡುಗೆ ನೀಡಿ




ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್‌ನ ಮಾತೃ ಸಂಸ್ಥೆ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್, ಸ್ಥಾಪಿಸಿರುವ ಪರಿಹಾರ ಟ್ರಸ್ಟ್, ಪ್ರತಿ ವರ್ಷಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದ ಅರ್ಹ ಬಡ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮುಂದಿನ ಶಿಕ್ಷಣಕ್ಕಾಗಿ ಧನ ಸಹಾಯ ಮಾಡುತ್ತಾಬಂದಿದೆ. ಸಾರ್ವಜನಿಕರು ಮತ್ತು ದಾನಿಗಳು ಸಂಸ್ಥೆಯ ಈ ಉದ್ದೇಶಕ್ಕೆ ನೆರವಾಗಬೇಕೆಂದು ಕೋರುತ್ತೇವೆ. ಚೆಕ್ ಅಥವಾ ಡಿ.ಡಿ. ರೂಪದಲ್ಲಿ ಹಣವನ್ನು `ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ ಪರಿಹಾರ ಟ್ರಸ್ಟ್' ಹೆಸರಿಗೆ ಕಳುಹಿಸಿ. ಒಂದು ಸಾವಿರ ರೂಪಾಯಿಗಿಂತ ಅಧಿಕ ನೆರವು ನೀಡುವವರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.



ಈ ದೇಣಿಗೆಗೆ ಆದಾಯ ತೆರಿಗೆ ಸೆಕ್ಷನ್ 80 ಜಿ ಅನ್ವಯ ಶೇ.50 ರಷ್ಟು ಆದಾಯ ತೆರಿಗೆ ವಿನಾಯಿತಿ ಇದೆ. ಆನ್‌ಲೈನ್ ಮೂಲಕ http://www.careeravenues.in/ dhutility/edurelief.aspx  ಅಕೌಂಟಿಗೆ ಹಣವನ್ನು ವರ್ಗಾಹಿಸುವ ಸೌಲಭ್ಯವೂ ಇದೆ.



ವಿಳಾಸ: ಮ್ಯಾನೇಜರ್, ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪರಿಹಾರ ಟ್ರಸ್ಟ್, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು- 560 001



ಸೂಚನೆ: ಲಕೋಟೆ ಮೇಲೆ `ಶೈಕ್ಷಣಿಕ ನೆರವಿಗೆ ಕೊಡುಗೆ' ಎಂದು ನಮೂದಿಸಿರಿ.



ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.