ಶನಿವಾರ, ಆಗಸ್ಟ್ 24, 2019
28 °C

ಪ್ರಜಾವಾಣಿ: 50 ವರ್ಷಗಳ ಹಿಂದೆ - ಮಂಗಳವಾರ, 6-8-1963

Published:
Updated:

ಕನ್ನಡ ಚಳವಳಿಯ ತರುಣರು ಕಾರಣ ಎಂದು ಅಧ್ಯಕ್ಷ ಶ್ರೀ ಶಿವಮೂರ್ತಿ ಶಾಸ್ತ್ರಿ

ಬೆಂಗಳೂರು, ಆ. 5
- ಜುಲೈ 28 ರಂದು ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ಸಭೆ ಸೇರಿದ ಉದ್ದೇಶವನ್ನು ಸಹಿಸದೆ ಮುಂದಕ್ಕೆ ಹೋದ ಘಟನೆಯ ವಿಚಾರದಲ್ಲಿ ಪರಿಷತ್ತಿನ ಅಧ್ಯಕ್ಷ ಶ್ರೀ ಬಿ. ಶಿವಮೂರ್ತಿ ಶಾಸ್ತ್ರಿಯವರು ನೀಡಿರುವ ಪತ್ರಿಕಾ ಹೇಳಿಕೆಯೊಂದರಲ್ಲಿ `ಅಂದಿನ ಸಭೆಗೆ ಪರಿಷತ್ತಿನ ಸದಸ್ಯರಲ್ಲದ ಕನ್ನಡ ಚಳವಳಿಯ ಹೆಸರಿನ ಕೆಲವರು ತರುಣರು ನುಗ್ಗಿ ರೋಷಾವೇಷದಿಂದ ಕೂಗಾಡಿ ಕಾರ್ಯಕಲಾಪಗಳು ನಡೆಯದ ಹಾಗೆ ಅಡಚಣೆ ಮಾಡಿದರು' ಎಂದು ಆರೋಪಿಸಿದ್ದಾರೆ.ಹಂಗಾಮಿ ಗೌವರ್ನರ್ ಆಗಿ ಶ್ರೀ ನಿಟ್ಟೂರ್

ಬೆಂಗಳೂರು, ಆ. 5
- ರಾಜ್ಯಪಾಲರಾದ ಶ್ರೀ ಜಯಚಾಮರಾಜ ಒಡೆಯರ್ ಅವರ ವಿದೇಶ ಪ್ರವಾಸ ಕಾಲದಲ್ಲಿ ರಾಜ್ಯದ ಶ್ರೇಷ್ಠ ನ್ಯಾಯಾಧೀಶ ಶ್ರೀ ನಿಟ್ಟೂರು ಶ್ರೀನಿವಾಸರಾವ್ ಅವರು ಹಂಗಾಮಿ ರಾಜ್ಯಪಾಲರಾಗಿ ನೇಮಕಗೊಳ್ಳುವರು. ರಾಜ್ಯಪಾಲರು ಆಗಸ್ಟ್ 7 ರಂದು ವಿದೇಶ ಪ್ರವಾಸಕ್ಕಾಗಿ ನಗರದಿಂದ ಪ್ರಯಾಣ ಮಾಡುವರು.

Post Comments (+)