ಶುಕ್ರವಾರ, ಜನವರಿ 24, 2020
17 °C

ಪ್ರಜಾವಾಣಿ 50 ವರ್ಷಗಳ ಹಿಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳವಾರ, 10–12–1963ಗಡಿರೇಖೆ ಉಲ್ಲಂಘನೆ

ನವದೆಹಲಿ, ಡಿ. 9
– ಕದನಸ್ತಂಭನ ರೇಖೆಗೆ ಭಾರತದ ಕಡೆಗಿರುವ ಚಕ್ನಾಟ್ ಬಗ್ಗೆ ಪಾಕಿಸ್ತಾನವು ಉಲ್ಲಂಘನೆ ಮಾಡಿದೆ ಎಂದೂ, ಭಾರತವು ಉಲ್ಲಂಘನೆ ಮಾಡಿಲ್ಲವೆಂದೂ ಕಾಶ್ಮೀರದಲ್ಲಿರುವ ವಿಶ್ವರಾಷ್ಟ್ರ ಸಂಸ್ಥೆಯ ಮುಖ್ಯ ಸೇನಾ ವೀಕ್ಷಕರು ತೀರ್ಪು ಕೊಟ್ಟಿದ್ದಾರೆ.ಸಮ್ಮೇಳನದ ಸಲಹೆ

ಬೆಂಗಳೂರು, ಡಿ. 9 
– ಸರ್ಕಾರ   ಆರ್ಥಿಕ ನೆರವು ನೀಡುವುದಾದರೆ ಮುಂದಿನ ಶಿಕ್ಷಣ ವರ್ಷದಿಂದ ಹೈಸ್ಕೂಲುಗಳಲ್ಲಿ 10ನೇ  ಸ್ಟಾಂಡರ್ಡ್‌ನ್ನು ಪ್ರಾರಂಭಿಸಬಹುದೆಂದು ಇಂದು ವಿಧಾನಸೌಧದಲ್ಲಿ  ನಡೆದ   ಶಾಲೆಗಳ ಮುಖ್ಯೋಪಾಧ್ಯಾಯರುಗಳ ಸಮ್ಮೇಳನವು ಅಭಿಪ್ರಾಯಪಟ್ಟಿದೆ.

ಅಮೆರಿಕದಲ್ಲಿ ಭಾರಿ ವಿಮಾನ ಅಪಘಾತ: 81 ಮಂದಿ ಸಾವು

ನ್ಯೂಯಾರ್ಕ್, ಡಿ. 9
– ಪಾನ್‌ ಅಮೆರಿಕನ್‌ ಬೋಯಿಂಗ್‌ 707 ಜೆಟ್‌ ವಿಮಾನವೊಂದು ಭಾನುವಾರ ರಾತ್ರಿ ಅಪಘಾತಕ್ಕೀಡಾಗಿ ಅದರಲ್ಲಿದ್ದ 81 ಮಂದಿ ಸಾವಿಗೀಡಾದರು.

ಪ್ರತಿಕ್ರಿಯಿಸಿ (+)