ಪ್ರಜಾಸತ್ತಾತ್ಮಕ ಸರ್ಕಾರ ಮರುಸ್ಥಾಪನೆಗೆ ಆಗ್ರಹ

ಸೋಮವಾರ, ಜೂಲೈ 22, 2019
27 °C

ಪ್ರಜಾಸತ್ತಾತ್ಮಕ ಸರ್ಕಾರ ಮರುಸ್ಥಾಪನೆಗೆ ಆಗ್ರಹ

Published:
Updated:

ಕೈರೊ/ವಾಷಿಂಗ್ಟನ್ (ಪಿಟಿಐ): ಈಜಿಪ್ಟ್ ಅಧ್ಯಕ್ಷರನ್ನು ಪದಚ್ಯುತಗೊಳಿಸಿ, ಸಂವಿಧಾನವನ್ನು ಅಮಾನತು ಮಾಡಿರುವ ಸೇನೆಯ ಕ್ಷಿಪ್ರಕ್ರಾಂತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ, ಐರೋಪ್ಯ ಒಕ್ಕೂಟ ಮತ್ತು ಬಲಾಢ್ಯ ರಾಷ್ಟ್ರಗಳು ಕೂಡಲೇ ಪ್ರಜಾಸತ್ತಾತ್ಮಕ ಸರ್ಕಾರವನ್ನು ಮರುಸ್ಥಾಪಿಸುವಂತೆ ಸೇನೆಗೆ ಆಗ್ರಹಿಸಿವೆ.`ಈಜಿಪ್ಟ್ ಜನರು ಶಾಂತಿ ಕಾಪಾಡಬೇಕು' ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಕರೆ ನೀಡಿದ್ದಾರೆ.`ಈಜಿಪ್ಟ್‌ನಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಮರುಸ್ಥಾಪಿಸಲು ಶೀಘ್ರ ಕ್ರಮಕೈಗೊಳ್ಳಬೇಕು' ಎಂದು ಐರೋಪ್ಯ ಒಕ್ಕೂಟ ಹೇಳಿದೆ.`ಚುನಾಯಿತ ಸರ್ಕಾರಕ್ಕೆ ಕೂಡಲೇ ಎಲ್ಲಾ ಅಧಿಕಾರವನ್ನು ಪಾರದರ್ಶಕವಾಗಿ ಹಸ್ತಾಂತರಿಸಬೇಕು. ಪದಚ್ಯುತ ಅಧ್ಯಕ್ಷ ಮೊರ್ಸಿ ಮತ್ತು ಅವರ ಆಪ್ತರನ್ನು ಮುಕ್ತಗೊಳಿಸಬೇಕು' ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಒತ್ತಾಯಿಸಿದ್ದಾರೆ.`ಈಜಿಪ್ಟ್ ಘಟನೆ ಅಪಾಯಕಾರಿ ಬೆಳವಣಿಗೆ. ಜನರು ಶಾಂತಿ ಕಾಪಾಡಬೇಕು' ಎಂದು ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ ಹೇಗ್ ಹೇಳಿದ್ದಾರೆ.`ನಾನೇ ದೇಶದ ನಿಜವಾದ ನಾಯಕ'

ಕೈರೊ (ಪಿಟಿಐ): ಈಜಿಪ್ಟ್ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಮೊರ್ಸಿ, `ನಾನೇ ದೇಶದ ನಿಜವಾದ ನಾಯಕ ಮತ್ತು ಸೇನೆಯ ಸರ್ವೋಚ್ಚ ದಂಡನಾಯಕ' ಎಂದು ಹೇಳಿಕೊಂಡಿದ್ದಾರೆ.ಸೇನೆಯ ಕ್ರಾಂತಿಯು ಆಕಸ್ಮಿಕ ಮತ್ತು ದಿಢೀರ್ ಕಾರ್ಯಾಚರಣೆ ಎಂದು ಮೊರ್ಸಿ ಅವರ ಅಂತರ್ಜಾಲದ ಫೇಸ್‌ಬುಕ್ ಖಾತೆಯ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry