ಶನಿವಾರ, ಏಪ್ರಿಲ್ 17, 2021
32 °C

ಪ್ರಜಾಸತ್ತಾತ್ಮಕ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ನೆಲ, ಜಲ, ಗಡಿ, ಭಾಷೆ, ರೈಲ್ವೆ ಯೋಜನೆಗಳು, ಕೇಂದ್ರದಿಂದ ದೊರೆಯುವ ಅನುದಾನ ಇತ್ಯಾದಿ ವಿಷಯಗಳಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಲು ಪ್ರಾದೇಶಿಕ ಪಕ್ಷದ ಅಗತ್ಯವಿದೆ.ಪ್ರಾದೇಶಿಕ ಪಕ್ಷ ಸ್ಥಾಪನೆಯ ಹಿಂದೆ ಪ್ರಾಮಾಣಿಕವಾದ ಕಳಕಳಿ, ಚಿಂತನೆ, ಉದ್ದೇಶ ಇರಬೇಕು. ಪ್ರಾದೇಶಿಕ ಪಕ್ಷ ಸ್ಥಾಪನೆ, ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಚಿಂತನೆ ಅಲ್ಲ. ಪ್ರಾದೇಶಿಕ ಪಕ್ಷ ಸ್ಥಾಪನೆ ಮಾಡುವವರ ಹಿನ್ನೆಲೆ, ಉದ್ದೇಶ ಬಹಳ ಮುಖ್ಯ.ನಾಟಕೀಯವಾಗಿ ಪಕ್ಷ ಸ್ಥಾಪನೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅಭಿವೃದ್ಧಿಯ ಚಿಂತನೆ ಇರಬೇಕು. ಕನ್ನಡಿಗರ ಹೆಸರಿನಲ್ಲಿ ರಾಜ್ಯವನ್ನು ಕಟ್ಟುವ, ಗಡಿ, ಜಲ, ಭಾಷೆಯನ್ನು ರಕ್ಷಿಸುವ ಕಾಳಜಿ ಹೊಂದಿರಬೇಕು.ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಭಾಷೆಯ ಹೆಸರಿನಲ್ಲಿ ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬಂದಿವೆ. ಆ ಪಕ್ಷಗಳು ಕೇಂದ್ರವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಶಕ್ತಿ ಹೊಂದಿವೆ. ಪ್ರಾದೇಶಿಕ ಪಕ್ಷಗಳ ಹೋರಾಟ ಪ್ರಜಾಸತ್ತಾತ್ಮಕವಾಗಿರಬೇಕು. ಕೇಂದ್ರದ ಶಕ್ತಿಗುಂದಿಸುವ ಉದ್ದೇಶವನ್ನು ಪ್ರಾದೇಶಿಕ ಪಕ್ಷಗಳು ಹೊಂದಬಾರದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.