ಗುರುವಾರ , ನವೆಂಬರ್ 21, 2019
20 °C

ಪ್ರಜಾ ಪ್ರಗತಿ ರಂಗದ ಪಟ್ಟಿ ಪ್ರಕಟ

Published:
Updated:

ಬೆಂಗಳೂರು: ಪ್ರಜಾ ಪ್ರಗತಿ ರಂಗವು ಮುಂಬರುವ ವಿಧಾನಸಭಾ ಚುನಾವಣೆಗೆ 23 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ ಬಿಡುಗಡೆಗೊಳಿಸಿತು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಜಾ ಪ್ರಗತಿ ರಂಗದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, `ಚುನಾವಣೆಯಲ್ಲಿ 15 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಸಾಹಿತಿ ಚಂದ್ರಶೇಖರ ಪಾಟೀಲ ಅವರು ಹಿಂದೆ ಪ್ರಜಾ ಪ್ರಗತಿ ರಂಗದ ಜತೆ ಗುರುತಿಸಿಕೊಂಡಿದ್ದರು. ಈಗ ಕೆಜೆಪಿ ಸೇರಿದ್ದಾರೆ. ಈ ಬಗ್ಗೆ ಬೇಸರವೇನೂ ಇಲ್ಲ' ಎಂದರು.ಅಭ್ಯರ್ಥಿಗಳ ಹೆಸರಿನ ಮುಂದೆ ವಿಧಾನಸಭಾ ಕ್ಷೇತ್ರದ ವಿವರ : ಅಮೀನ್ ಪಾಷಾ ದಿದ್ದಗಿ - ಸಿಂಧನೂರು, ರಾಜೀವ್ ಚೌಹಾಣ್ ಬೆಟಸೂರು - ಲಿಂಗಸೂರು ಮೀಸಲು ಕ್ಷೇತ್ರ, ಕೆ.ಜೈರುದ್ದೀನ್ - ಹೊಸಪೇಟೆ, ಜಡಿಯಪ್ಪ ದೇಸಾಯಿ - ಸಿರಗುಪ್ಪ ಮೀಸಲು ಕ್ಷೇತ್ರ, ಚಿನ್ನಸಮುದ್ರ ಶೇಖರ್ ನಾಯ್ಕ - ಮಾಯಕೊಂಡ ಮೀಸಲು ಕ್ಷೇತ್ರ, ನಾಗರಾಜು - ಹರಿಹರ, ಬೈಚೇಗೌಡ - ಶ್ರೀನಿವಾಸಪುರ, ಗಣೇಶಗೌಡ ಕೋಟಿಗಾನಹಳ್ಳಿ - ಕೋಲಾರ, ಸುರೇಶ್ - ಆನೇಕಲ್, ನಜೀರ್ ಸಾಬ್ ಮೂಲೆಮನೆ - ಕುಷ್ಟಗಿ, ಬಿ.ಎಚ್.ನರಸಿಂಹಪ್ಪ - ಚಿಕ್ಕಬಳ್ಳಾಪುರ, ನಾರಾಯಣಸ್ವಾಮಿ - ಬಾಗೇಪಲ್ಲಿ, ಚಿತ್ರಾಹಳ್ಳಿ ಬೈರೇಗೌಡ - ಶಿಡ್ಲಘಟ್ಟ,ಎ.ಸಿ.ರವಿಕುಮಾರ್ ಆನೇಕೆರೆ - ಹೊಳೆನರಸೀಪುರ, ಮಂಜೇಗೌಡ ಅರಳಾಪುರ - ಚನ್ನರಾಯಪಟ್ಟಣ, ಕೋಡಿಹಳ್ಳಿ ಚಂದ್ರಶೇಖರ್ - ಅರಸೀಕೆರೆ, ಯೋಗ ರಮೇಶ್ - ಅರಕಲಗೂಡು, ಕೆಂಕೆರೆ ಸತೀಶ್ - ಚಿಕ್ಕನಾಯಕನಹಳ್ಳಿ, ಡಿ.ಎಸ್.ದೇವರಾಜು - ತಿಪಟೂರು, ಇಂಧೂದರ ಅಂಗಡಿ - ಶಿಕಾರಿಪುರ, ಚಿಕ್ಕಬ್ಬಿಗೆರೆ ನಾಗರಾಜು - ಚಿತ್ರದುರ್ಗ, ಅಶೋಕ ಎಸ್. ಸೋರೆಗಾಂವ್ - ಇಂಡಿ, ಚಂದ್ರೇಗೌಡ ಜಿ. ಪಾಟೀಲ - ಸಿಂಧಗಿ.

ಪ್ರತಿಕ್ರಿಯಿಸಿ (+)