ಪ್ರಜೀತಾಗೆ ಒಲಿದ ಸಂಗೀತ

7

ಪ್ರಜೀತಾಗೆ ಒಲಿದ ಸಂಗೀತ

Published:
Updated:
ಪ್ರಜೀತಾಗೆ ಒಲಿದ ಸಂಗೀತ

ತನ್ನ ಗ್ರಾಹಕರು ಹಾಗೂ ಉದ್ಯೋಗಿಗಳನ್ನು ಸದಾ ಖುಷಿಯಲ್ಲಿಡಲು ಆಹಾರ ಮಳಿಗೆಗಳ ಸರಣಿ ಮ್ಯಾಕ್‌ಡೋನಾಲ್ಡ್ ಸದಾ ಒಂದಲ್ಲೊಂದು ಚಟುವಟಿಕೆ ನಡೆಸುತ್ತಲೇ ಇರುತ್ತದೆ.ಅದು ಈಗ ತನ್ನ ಉದ್ಯೋಗಿಗಳಿಗಾಗಿ `ವಾಯ್ಸ ಆಫ್ ಮ್ಯಾಕ್‌ಡೋನಾಲ್ಡ್ಸ್~ ಎಂಬ ವಿಶ್ವ ಸಂಗೀತ ಸ್ಪರ್ಧೆ ನಡೆಸುತ್ತಿದೆ. ಈಚೆಗೆ ಮುಂಬೈನಲ್ಲಿ ನಡೆದ ಪ್ರಾಂತೀಯ ಸ್ಪರ್ಧೆಯಲ್ಲಿ ಬೆಂಗಳೂರಿನ ಪ್ರಜೀತಾ ಅನ್ನೆದಾತ್ ಅವರು ವಿಜೇತರಾಗಿ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ. ಸಂಗೀತಗಾರ ಮಿಲಿಂದ್ ಇಂಗಳೆ, ಗಾಯಕ ಕೈಲಾಶ್ ಖೇರ್ ಮತ್ತು ಹಾರ್ಡ್ ಕೌರ್ ತೀರ್ಪುಗಾರರಾಗಿದ್ದರು.ಪ್ರಜೀತಾಗೆ ಅಮೆರಿಕದ ಫ್ಲೋರಿಡಾದಲ್ಲಿ ನಡೆಯ ಲಿರುವ ಗ್ರ್ಯಾಂಡ್ ಫಿನಾಲೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ಅಲ್ಲಿ ಗೆದ್ದವರಿಗೆ  25 ಸಾವಿರ ಅಮೆರಿಕನ್ ಡಾಲರ್ ಬಹುಮಾನ ದೊರೆಯಲಿದೆ.ಇಂಥ ಅಪರೂಪದ ಅವಕಾಶದಿಂದ ಪ್ರಜೀತಾ ಖುಷಿಯಾಗಿದ್ದಾರೆ. `ವಾಯ್ಸ ಆಫ್ ಮ್ಯಾಕ್‌ಡೊನಾಲ್ಡ್ ಪ್ರಾಂತೀಯ ಸ್ಪರ್ಧೆಯಲ್ಲಿ ವಿಜೇತೆಯಾಗಿರುವುದು ಅತ್ಯಂತ ಸಂತಸ ತಂದಿದೆ. ನನಗೆ ಸಂಗೀತ ಎಂದರೇ ಉಸಿರಿದ್ದಂತೆ~ ಎನ್ನುತ್ತಾರೆ.`ಮ್ಯಾಕ್‌ಡೊನಾಲ್ಡ್ ತನ್ನ ಉದ್ಯೋಗಿಗಳ ನಡುವೆ ಸಂಗೀತ ಸೊಗಡು ಪಸರಿಸಲು ಶ್ರಮಿಸುತ್ತಿರುವುದು ಖುಷಿಯ ವಿಚಾರ~ ಎಂದು ಹೇಳುತ್ತಾರೆ ಖೇರ್.

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry