ಪ್ರಜ್ಞಾವಂತರಲ್ಲಿ ಸಂಸ್ಕೃತಿ ಹೀನತೆ: ಕಳವಳ

7

ಪ್ರಜ್ಞಾವಂತರಲ್ಲಿ ಸಂಸ್ಕೃತಿ ಹೀನತೆ: ಕಳವಳ

Published:
Updated:
ಪ್ರಜ್ಞಾವಂತರಲ್ಲಿ ಸಂಸ್ಕೃತಿ ಹೀನತೆ: ಕಳವಳ

ಸವಣೂರ: `ಉನ್ನತ ವ್ಯಕ್ತಿತ್ವ ಹಾಗೂ ಜೀವನಾದರ್ಶಗಳನ್ನು ಹೊಂದಲು ವಿವೇಕಾನಂದರ ಆದರ್ಶಗಳ ಅವಶ್ಯಕತೆ ಇದೆ. ಮನುಷ್ಯನ ಮನಸ್ಸು ದುರ್ಬಲವಾದ ಸಂದರ್ಭದಲ್ಲಿ ವಿವೇಕಾನಂದರ ಜೀವನ ಸಂದೇಶ ಹೆಚ್ಚು ಪ್ರಸ್ತುತವಾಗುತ್ತದೆ' ಎಂದು ರಾಣೆಬೆನ್ನೂರಿನ ಸ್ವಾಮಿ ವಿವೇಕಾನಂದ ಆಶ್ರಮದ ಪ್ರಕಾಶಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ಸರ್ಕಾರಿ ಮಜೀದ್ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಸ್ವಾಮಿ ವಿವೇಕಾನಂದರ 150ನೇ ಜಯಂತಿ, ಯುವ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಶಿಕ್ಷಣ ಮನುಷ್ಯನ ಪಶುತ್ವವನ್ನು ಕಳೆದು ದೈವತ್ವದ ಕಡೆಗೆ ಕರೆದೊಯ್ಯಬೇಕು.

ಸಂಪೂರ್ಣ ಜಗತ್ತಿಗೆ ಜ್ಞಾನ ಸಂಪತ್ತನ್ನು ಹಂಚಿದ್ದ ಭಾರತೀಯರು ಇಂದು ವಿದೇಶಿ ಶಿಕ್ಷಣ ಪದ್ದತಿಯ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಪರಿಣಾಮ, ಪ್ರಜ್ಞಾವಂತರ ಲ್ಲಿಯೂ ಸಂಸ್ಕೃತಿ ಹೀನತೆಯ ಲಕ್ಷಣಗಳು ಕಂಡುಬರುತ್ತಿದೆ. ಸಂಸ್ಕೃತಿ, ಸಂಸ್ಕಾರಗಳನ್ನು ನೀಡದ ಶಿಕ್ಷಣ, ದೇಶದ ಭವಿಷ್ಯವನ್ನೆ ಹಾಳುಮಾಡುತ್ತದೆ. ನಾಯಕತ್ವ ಗುಣವನ್ನು ಅಳಿಸಿಹಾಕುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜು ಸುಧಾರಣಾ ಸಮಿತಿ ಅಧ್ಯಕ್ಷ ರಾಜಶೇಖರ ಸಿಂಧೂರ, ದೇಶಿ ಸಂಸ್ಕೃತಿ ಹಾಗೂ ಜೀವನ ಪದ್ದತಿಗಳನ್ನು, ಧರ್ಮ ಪ್ರಜ್ಞೆಯನ್ನು ಮೂಡಿಸಿಕೊಳ್ಳುವಂತೆ ಸೂಚಿಸಿದರು.         ಪ್ರಾಚಾರ್ಯ ವೈ.ವಿ. ಯತ್ನಳಿ, ವಿವೇಕಾನಂದರ ಆದರ್ಶಗಳನ್ನು ಅಳವಡಿಸಿ ಕೊಳ್ಳುವಂತೆ ತಿಳಿಸಿದರು.

ಎಸ್.ಬಿ. ಶಿವಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಬಿವಿಪಿ ಕಾರ್ಯಕರ್ತ ಈರಯ್ಯ ಹಿರೇಮಠ ಸ್ವಾಮಿ ವಿವೇಕಾನಂದರ ಕುರಿತ ಗೀತೆಯನ್ನು ಪ್ರಸ್ತುತಪಡಿಸಿದರು. ಕಾಲೇಜು ಸುಧಾರಣಾ ಸಮಿತಿ ಸದಸ್ಯರಾದ ರಮಾದೇವಿ ಶೆಂಡಗೆ, ಲಲಿತಾ ರಿತ್ತಿ, ಡಾ. ಜಿ.ಕೆ. ದೇವಾಡಿಗ, ಸ್ವಾಮಿ ವಿವೇಕಾನಂದ ಆಶ್ರಮದ ಸದಸ್ಯ ಅರುಣ ಮಹಾರಾಜ, ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು. ಉಪನ್ಯಾಸಕ ಎ.ವಿ. ಹಾಲಗಿ ಸ್ವಾಗತಿ ಸಿದರು, ಶಿವಾನಂದ ಮರಿಗೌಡ್ರ ನಿರ್ವಹಿಸಿದರು.ಹಾನಗಲ್ ವರದಿ

ಹಾನಗಲ್:
`ಇಡೀ ಜಗತ್ತನ್ನೆ ಭಾರತದ ಕಡೆಗೆ ಸೆಳೆದ ಅದಮ್ಯ ಶಕ್ತಿಯ ರಾಷ್ಟ್ರ ಪುರುಷ, ವೀರ ಸನ್ಯಾಸಿಯಾಗಿದ್ದ ಸ್ವಾಮಿ ವಿವೇಕಾನಂದರು ಸರ್ವಕಾಲಕ್ಕೂ ಆದರ್ಶರು' ಎಂದು ಹಾನಗಲ್ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಎಸ್.ಬಿ. ಕಮಾಟಿ ಅಭಿಪ್ರಾಯಪಟ್ಟರು.ಇಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.ಸಾಹಿತಿ ಮಾರುತಿ ಶಿಡ್ಲಾಪುರ, ಉಪನ್ಯಾಸಕರಾದ ಬಿ.ಎಂ. ಕಾಡಪ್ಪನವರ, ಮಹೇಂದ್ರ ಬಾರಿಕರ, ವೀಣಾ ದೇವರಗುಡಿ ಕಾರ್ಯಕ್ರಮದಲ್ಲಿ ಪಾಲ್ಗೊಂ ಡಿದ್ದರು.

ಸಪ್ತಾಹದ ಅಂಗವಾಗಿ ವಿವೇಕಾನಂದರ ರಾಷ್ಟ್ರೀಯ, ವೈಚಾರಿಕ, ಸಮಾಜಮುಖಿ ಚಿಂತನೆಗಳ ಕುರಿತು ಉಪನ್ಯಾಸ ಹಾಗೂ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆಗಳು, ಚಿತ್ರ ಬಿಡಿಸುವುದು, ವಿವೇಕಾನಂದರನ್ನು ಕುರಿತು ನುಡಿ ಮುತ್ತುಗಳನ್ನು ರಚಿಸುವ ಸ್ಪರ್ಧೆ ನಡೆಸುವುದಾಗಿ ಇದೇ ಸಂದರ್ಭದಲ್ಲಿ ಪ್ರಕಟಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry