ಭಾನುವಾರ, ಜನವರಿ 19, 2020
19 °C

ಪ್ರಣವ್ ಅರುಣಾಚಲ ಪ್ರದೇಶ ಭೇಟಿಗೆ ಚೀನಾ ಸಿಡಿಮಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅರುಣಾಚಲ ಪ್ರದೇಶ ಪ್ರವಾಸಕ್ಕೆ ನೆರೆಯ ಚೀನಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಗಡಿ ವಿವಾದವನ್ನು ಮತ್ತಷ್ಟು ಜಟಿಲಗೊಳಿಸದಂತೆ ಎಚ್ಚರಿಕೆ ನೀಡಿದೆ. ‘ಅರುಣಾಚಲ ಪ್ರದೇಶ ಅಖಂಡ ಭಾರತದ ಅವಿಭಾಜ್ಯ ಅಂಗ’ ಎಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ  ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.ಅರುಣಾಚಲ ಪ್ರದೇಶ  ವಿಧಾನಸಭೆ ಸದಸ್ಯರನ್ನು ಉದ್ದೇಶಿಸಿ ಪ್ರಣವ್‌ ಈ ಮಾತು ಹೇಳಿದ್ದರು. ಈಶಾನ್ಯ ಭಾರತದ ಪ್ರಮುಖ ರಾಜ್ಯವಾಗಿರುವ ಅರುಣಾ­ಚಲ ಪ್ರದೇಶ ಪೌರಾತ್ಯ ವಿದೇಶಾಂಗ ನೀತಿಯ ಅತಿ ಮುಖ್ಯ ಪಾಲುದಾರ ಎಂದು ಅವರು ಶ್ಲಾಘಿಸಿದರು.

ಪ್ರಣವ್‌ ಅರುಣಾಚಲ ಭೇಟಿಯ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ದ್ವಿಪಕ್ಷೀಯ ಸಂಬಂಧ  ಕಾಪಾಡುವ ದೃಷ್ಟಿಯಿಂದ ಗಡಿ ವಿವಾದವನ್ನು ಸಂಕೀರ್ಣಗೊಳಿಸದಂತೆ  ಎಚ್ಚರಿಕೆ ನೀಡಿದೆ.ಚೀನಾ ಈ ಹಿಂದೆಯೂ ರಾಷ್ಟ್ರಪತಿ ಪ್ರತಿಭಾ ಪಾಟೀಲ, ಪ್ರಧಾನಿ ಮನ­ಮೋಹನ್‌ ಸಿಂಗ್‌ ಮತ್ತು ರಕ್ಷಣಾ ಸಚಿವ ಎ.ಕೆ. ಆಂಟನಿ ಅರುಣಾಚಲ ಪ್ರದೇಶ ಭೇಟಿಯನ್ನು ತೀವ್ರವಾಗಿ ವಿರೋಧಿಸಿತ್ತು. ಅರುಣಾಚಲ ಪ್ರದೇಶ  ತನ್ನದು ಎಂದು ವಾದಿಸುತ್ತಿರುವ ಚೀನಾ, ಈ ವಿವಾದಿತ ಪ್ರದೇಶ ಕುರಿತಂತೆ ಇಂದಿಗೂ ತನ್ನ ನಿಲುವು ಸ್ಪಷ್ಟವಾಗಿದ್ದು ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರತಿಕ್ರಿಯಿಸಿ (+)