ಶುಕ್ರವಾರ, ಜೂನ್ 25, 2021
21 °C

ಪ್ರತಾಪಸಿಂಹ ಮಡದಿ ಖಾತೆಯಲ್ಲಿ ₨ 5!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು– ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಅವರ ಪತ್ನಿ ಜೆ.ಎಸ್‌. ಅರ್ಪಿತಾ ಹೆಸರಿನಲ್ಲಿ ಮೂಡುಬಿದಿರೆಯ ಕೆನರಾ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಕೇವಲ ಐದು ರೂಪಾಯಿ ಇದೆ!ಚುನಾವಣಾಧಿಕಾರಿಯೂ ಆಗಿ­ರುವ ಜಿಲ್ಲಾಧಿಕಾರಿ ಸಿ. ಶಿಖಾ ಅವರಿಗೆ ಪ್ರತಾಪ­ಸಿಂಹ ಅವರು ಗುರುವಾರ ಸಲ್ಲಿ­ಸಿದ ಆಸ್ತಿ ವಿವರದಲ್ಲಿ ಇದನ್ನು ನಮೂ­ದಿಸಿ­ದ್ದಾರೆ. ಅರ್ಪಿತಾ ಹೆಸರಿ­ನಲ್ಲಿ ಚಿಕ್ಕಮಗಳೂರಿನ ಎಸ್‌ಬಿಎಂ ಶಾಖೆಯ ಖಾತೆಯಲ್ಲಿ ₨ 272, ಎಚ್‌ಡಿಎಫ್‌ಸಿ ಬ್ಯಾಂಕಿನ ಖಾತೆಯಲ್ಲಿ ₨ 1,997 ಹಣ ಇದೆ. ಇವರ ಹೆಸರಿನಲ್ಲಿ ಮೈಸೂರಿನ ವಿಜಯ­ನಗರದ 4ನೇ ಹಂತದಲ್ಲಿ 60x40 ನಿವೇಶನ (ಮೌಲ್ಯ ₨ 3 ಲಕ್ಷ) ಇದೆ. ಕಳೆದ ಆರ್ಥಿಕ ವರ್ಷದಲ್ಲಿ ₨ 7,85,317 ಆದಾಯ ತೋರಿಸಿದ್ದಾರೆ.ಪ್ರತಾಪಸಿಂಹ ಅವರು ₨ 55.85 ಲಕ್ಷ ಮೌಲ್ಯದ ಆಸ್ತಿ ಹೊಂದಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ₨ 7,85,317 ಆದಾಯ ತೋರಿಸಿ­ದ್ದಾರೆ. ಬೆಂಗಳೂರಿನ ಬನಶಂಕರಿ 2ನೇ ಹಂತದ ಹೊಸಕೆರೆಹಳ್ಳಿಯ ಸಪ್ತಗಿರಿ­ನಗರದಲ್ಲಿ 30x50 ಅಳತೆಯ ನಿವೇಶನ (ಮೌಲ್ಯ ₨ 48 ಲಕ್ಷ) ಹೊಂದಿದ್ದಾರೆ. ಇವರು ಬೆಂಗಳೂರಿನ ಬನಶಂಕರಿಯ 3ನೇ ಹಂತದ ಗಿರಿನಗರದ ನಿವಾಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.