ಸೋಮವಾರ, ಜನವರಿ 20, 2020
22 °C

ಪ್ರತಿಕಾ ಭವನ ನಿರ್ಮಾಣಕ್ಕೆ ₨3ಲಕ್ಷ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಸಿಂಹರಾಜಪುರ : ಪಟ್ಟಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿ ಯಿಂದ  ನಿರ್ಮಿಸುತ್ತಿರುವ ಪತ್ರಕರ್ತರ ಭವನದ ಮುಂದುವರೆದ ಕಾಮಗಾರಿಗೆ ₨3ಲಕ್ಷ ಅನುದಾನ ಬಿಡುಗಡೆ ಮಾಡ ಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಶ್ರೀನಿವಾಸ್ ತಿಳಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು  ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ 2013–14 ನೇ ಸಾಲಿನ 3ನೇ ಕಂತಿನಲ್ಲಿ ಬಿಡುಗಡೆಯಾಗಿರುವ ಒಟ್ಟು ₨45.95ಲಕ್ಷ ಅನುದಾನದಲ್ಲಿ ತಾಲ್ಲೂಕಿನ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಅದರಲ್ಲಿ  ಪ್ರಮುಖವಾಗಿ ಕಡಹಿನ ಬೈಲು ಗ್ರಾಮದ ಭದ್ರಾ ಕಾಲೋನಿ ಯಲ್ಲಿ ನಿರ್ಮಿಸಲಾ ಗುತ್ತಿರುವ ಸಾರ್ವಜನಿಕ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ ₨3. 50ಲಕ್ಷ .

ಕಡಹಿನ ಬೈಲು ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಕಾಮಗಾರಿಗೆ ₨ 2ಲಕ್ಷ , ಗುಳ್ಳದ ಮನೆ ಶೆಟ್ಟಿಕೊಪ್ಪ ರಸ್ತೆಯಿಂದ ಗೌರಿಹಿತ್ಲು ರಸ್ತೆಗೆ ಜಲ್ಲಿ ಚಿಚಾವಣೆ ಕಾಮಗಾರಿ ₨1.94ಲಕ್ಷ,  ಪಟ್ಟಣದ 2ನೇ ವಾರ್ಡ್‌ನ ಮುತ್ತು ಮಾರಿ ಯಮ್ಮ ಸಾರ್ವಜನಿಕ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ₨3.04ಲಕ್ಷ, ಬಿ.ಎಚ್.ಕೈಮರ  ಅಯ್ಯಪ್ಪಸ್ವಾಮಿ ಭಜನಾ ಸೇವಾ ಸಮಿತಿ ಅವರು ನಿರ್ಮಿಸುತ್ತಿರುವ ಸಾರ್ವಜನಿಕ ಸಮುದಾಯ ಭವನದ ನಿರ್ಮಾಣದ ಮುಂದುವರೆದ ಕಾಮಗಾರಿಗೆ ₨3ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)