ಪ್ರತಿಕೃತಿ ದಹಿಸಿದವರ ವಿರುದ್ಧ ಎಫ್‌ಐಆರ್

7
ಅಫ್ಜಲ್ ಗಲ್ಲು ಖಂಡಿಸಿ ಪ್ರಧಾನಿ, ಸೋನಿಯಾ ಪ್ರತಿಕೃತಿ ದಹನ

ಪ್ರತಿಕೃತಿ ದಹಿಸಿದವರ ವಿರುದ್ಧ ಎಫ್‌ಐಆರ್

Published:
Updated:
ಪ್ರತಿಕೃತಿ ದಹಿಸಿದವರ ವಿರುದ್ಧ ಎಫ್‌ಐಆರ್

ಸಂಭಾಲ್ (ಉತ್ತರ ಪ್ರದೇಶ) (ಪಿಟಿಐ): ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ ಕ್ರಮ ಖಂಡಿಸಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪ್ರತಿಕೃತಿ ದಹಿಸಿದ 13 ಜನರ ವಿರುದ್ಧ ಎಫ್‌ಆರ್‌ಐ ದಾಖಲಿಸಲಾಗಿದೆ.ಪ್ರಧಾನಿ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರ ಪ್ರತಿಕೃತಿ ದಹಿಸಿದ ಇನಾಮುರ್ ರೆಹಮಾನ್ ಹಾಗೂ ಇತರೆ 12 ಜನರ ವಿರುದ್ಧ ಭಾರತೀಯ ದಂಡ ಸಂಹಿತೆ ಸೇಕ್ಷನ್ 188 (ಆದೇಶಕ್ಕೆ ಅಸಹಕಾರ) ಮತ್ತು ಸೇಕ್ಷನ್ 124ರ (ರಾಷ್ಟ್ರ ದ್ರೋಹ) ಅಡಿಯಲ್ಲಿ ಶನಿವಾರ ರಾತ್ರಿ ಎಫ್‌ಆರ್‌ಐ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry