ಪ್ರತಿಕ್ರಿಯಿಸಲು ನಾನಿಲ್ಲ: ಈಶ್ವರಪ್ಪ

7

ಪ್ರತಿಕ್ರಿಯಿಸಲು ನಾನಿಲ್ಲ: ಈಶ್ವರಪ್ಪ

Published:
Updated:

ಶಿವಮೊಗ್ಗ: `ಯಡಿಯೂರಪ್ಪ ಹೇಳಿದ್ದಕ್ಕೆಲ್ಲ ಉತ್ತರ ಕೊಡುವ ಅಗತ್ಯವಿಲ್ಲ. ಅದಕ್ಕಾಗಿಯೇ ನಾನಿಲ್ಲ~ ಎಂದು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.ನಗರದಲ್ಲಿ ಮಂಗಳವಾರ ವಿನೋಬನಗರ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.`ನೀವು ಇದನ್ನೇ ಕೇಳುತ್ತೀರಿ ಎಂಬುವುದು ತಮಗೆ ಗೊತ್ತಿತ್ತು. ಯಡಿಯೂರಪ್ಪ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಒಂದಲ್ಲ ನೂರು ಸಾರಿ ಬೇಕಾದರೂ ಇದನ್ನೇ ಹೇಳುತ್ತೇನೆ~ ಎಂದು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.ಶಿವಮೊಗ್ಗದ ಮಹಾತ್ಮ ಗಾಂಧಿ ಪಾರ್ಕ್ ಉದ್ಘಾಟನೆಗೆ ಸಂಬಂಧಿಸಿದಂತೆ ನಗರಸಭೆ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ತಮ್ಮ ಸಮಯ ನೋಡಿಕೊಂಡು ದಿನಾಂಕ ನಿಗದಿ ಮಾಡುತ್ತಾರೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry