ಪ್ರತಿಕ್ರಿಯೆ

7

ಪ್ರತಿಕ್ರಿಯೆ

Published:
Updated:

ಆತಂಕಗೊಂಡಿದ್ದೇನೆ

`25 ವರ್ಷಗಳಿಂದ ಇದೇ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದೇನೆ. ವ್ಯಾಪಾರದಿಂದ ಬಂದ ಲಾಭದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದೆ. ಅಗ್ನಿ ಅನಾಹುತದಲ್ಲಿ ಅಂಗಡಿ ಸಂಪೂರ್ಣ ಸುಟ್ಟು ಹೋಗಿದ್ದು, ಸುಮಾರು 50 ಸಾವಿರ ರೂಪಾಯಿ ನಷ್ಟವಾಗಿದೆ. ಆದಾಯದ ಮೂಲವಾಗಿದ್ದ ಅಂಗಡಿ ಸುಟ್ಟು ಹೋಗಿರುವುದರಿಂದ ಜೀವನ ನಿರ್ವಹಿಸುವುದು ಹೇಗೆಂದು ಆತಂಕಗೊಂಡಿದ್ದೇನೆ~.-ಲಕ್ಷ್ಮಣ್, ರಸೆಲ್ ಮಾರುಕಟ್ಟೆಯ ವಿನಾಯಕ ಫ್ಲವರ್ ಶಾಪ್‌ನ ಮಾಲೀಕದಿಕ್ಕೇ ತೋಚದಂತಾಗಿದೆ

 `ಜೀವನಾಧಾರವಾಗಿದ್ದ ಅಂಗಡಿ ಸುಟ್ಟು ಹೋಗಿರುವುದರಿಂದ ದಿಕ್ಕೇ ತೋಚದಂತಾಗಿದೆ. ಸಾಕಷ್ಟು ಸಾಲ ಮಾಡಿ ಬಂಡವಾಳ ಹೂಡಿದ್ದೆ. ಅಂಗಡಿಗೆ ಹಾನಿಯಾಗಿರುವುದರಿಂದ ಆರ್ಥಿಕವಾಗಿ ತೊಂದರೆಯಾಗಿದೆ. ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ~.-ಚೌದರಿ ಮಹಮ್ಮದ್, ಡೆಲಿಶಿಯಸ್ ಡ್ರೈ ಫ್ರೂಟ್ಸ್ ಅಂಗಡಿ ಮಾಲೀಕಸುಸಜ್ಜಿತ ಮಾರುಕಟ್ಟೆ


`ಹಾನಿಗೊಳಗಾಗಿರುವ ಅಂಗಡಿಗಳ ಮಾಲೀಕರಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು. ರಸೆಲ್ ಮಾರುಕಟ್ಟೆಯ ಜಾಗದಲ್ಲೇ ಸುಸಜ್ಜಿತ ಮಾರುಕಟ್ಟೆ ಕಟ್ಟಬೇಕು. ಮಾರುಕಟ್ಟೆ ಪುನರ್ ನಿರ್ಮಿಸುವಾಗ ಕಟ್ಟಡದ ಪಾರಂಪರಿಕ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಳ್ಳಬೇಕು~.-ಶಾಸಕ ಆರ್.ರೋಷನ್‌ಬೇಗ್ಬಿಬಿಎಂಪಿ ಸಂಚು

`ರಸೆಲ್ ಮಾರುಕಟ್ಟೆ ಕಟ್ಟಡವನ್ನು ನೆಲಸಮಗೊಳಿಸಿ ಆ ಜಾಗದಲ್ಲಿ ಬಹುಮಹಡಿ ಕಟ್ಟಡ ಕಟ್ಟಲು ಬಿಬಿಎಂಪಿ ಆಡಳಿತ ಚಿಂತನೆ ನಡೆಸಿದೆ. ಈ ಕಾರಣಕ್ಕಾಗಿ ಮಳಿಗೆಗಳನ್ನು ಖಾಲಿ ಮಾಡುವಂತೆ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು, ವ್ಯಾಪಾರಿಗಳಿಗೆ ಕೆಲ ತಿಂಗಳುಗಳ ಹಿಂದೆ ಸೂಚನೆ ನೀಡಿದ್ದರು.

 

ಇದಕ್ಕೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಸಂಚು ರೂಪಿಸಿ ಮಾರುಕಟ್ಟೆಗೆ ಬೆಂಕಿ ಹಾಕಿಸಿದ್ದಾರೆ. ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಕಾರಣಕ್ಕಾಗಿ ಪಾಲಿಕೆ ಆಡಳಿತವೇ ಈ ದುಷ್ಕೃತ್ಯ ಎಸಗಿದೆ. ಆದ್ದರಿಂದ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು~.

-ಆರ್.ವಿ.ಗೋಪಿ, ತರಕಾರಿ ಮತ್ತು ಹಣ್ಣು ಸಗಟು ವ್ಯಾಪಾರಿಗಳ ಸಂಘದ ಅಧ್ಯಕ್ಷರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry