ಪ್ರತಿಕ್ರಿಯೆಗಳು

ಮಂಗಳವಾರ, ಜೂಲೈ 16, 2019
28 °C

ಪ್ರತಿಕ್ರಿಯೆಗಳು

Published:
Updated:

ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿಯವರ `ಸಂಶೋಧಕನಾಗಿ ನಾನೊಬ್ಬ ಪಥಿಕ' (ಸಾಹಿತ್ಯ ಪುರವಣಿ ಜೂನ್ 02) ಮುಖಪುಟ ಲೇಖನ ಗಮನಾರ್ಹವಾಗಿತ್ತು. ಅಜಮಾಸು ಆರು ದಶಕಗಳ ಕಾಲ ಭಾಷಾಶಾಸ್ತ್ರದ ಬದುಕು, ಬರವಣಿಗೆಯು ಅವರಿಗೆ ಬೇಸರ ತಂದಿಲ್ಲ.

ಎಂಬತ್ತರ ಪ್ರಾಯದಲ್ಲೂ ತ್ರಾಣ, ತಾಳ್ಮೆ ತಮ್ಮಂದಿಗೆ ಸಹಕರಿಸುತ್ತಿಲ್ಲವೆಂದು ವಿಷಾದಿಸಿದ, `ಸಂಶೋಧಕನಾಗಿ ನಾನೊಬ್ಬ ಪಥಿಕ'ನೆಂದು ವಿನಯಪೂರ್ವಕ ನಿವೇದಿಸಿಕೊಳ್ಳುವುದು ಶಾಸ್ತ್ರಿಗಳ ಪಾಂಡಿತ್ಯದ ಪ್ರತೀಕ. ಸಂಶೋಧಕನ ಮನೋಧರ್ಮ, ಸಂಶೋಧನೆಯ ಸ್ವರೂಪ, ಆತನ ಪಾಂಡಿತ್ಯ, ವಿಷಯ ವೈವಿಧ್ಯತೆಗಳ ಕುರಿತು ಬರೆದ ಅವರ ಕೃತಿಗಳು ಯುವ ಭಾಷಾ ವಿದ್ವಾಂಸರಿಗೆ ದಾರಿದೀಪಗಳಾಗಬಲ್ಲವು.

-ಮೋಹನ್. ರು. ಹಣಗಿ, ಅಮೀನಗಡ.

  ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಲೇಖನ `ಕತೆ ನಮ್ಮ ಬದುಕನ್ನು ಮತ್ತೆ ಪ್ರವೇಶಿಸಲಿ' ಚಿಂತನಾರ್ಹವಾಗಿತ್ತು. ಓದುವ ಪ್ರವೃತ್ತಿ ಕಡಿಮೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಪಟ್ಟು ಹಿಡಿದು ಕತೆ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ.`ವಡ್ಡಾರಾಧನೆ'ಯ ನೆಪದಲ್ಲಿ ಕಥಾಲೋಕದ ಪ್ರಾಮುಖ್ಯವನ್ನು ತಿಳಿಸಿಕೊಟ್ಟಿದ್ದಾರೆ. ಪ್ರತಿ ತಿಂಗಳು `ನೆಲಸಿರಿ' ಅಂಕಣದಲ್ಲಿ ಬರುತ್ತಿರುವ ಅವರ ಬರಹಗಳು ಸಾಹಿತ್ಯಾಸಕ್ತರಿಗೆ ಮಾರ್ಗದರ್ಶಿಯಾಗಿವೆ.

-ಮ.ಸಾ. ತೊದಲಬಾಗಿ, ವಿಜಾಪುರ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry