ಭಾನುವಾರ, ನವೆಂಬರ್ 17, 2019
28 °C

ಪ್ರತಿಕ್ರಿಯೆಗಳು 26

Published:
Updated:

ಸುಕೇತು ಮೆಹ್ತಾರವರ `ಬರಹಗಾರನ ಧರ್ಮ'  (ಮಾರ್ಚ್ 2013) ಲೇಖನ ಗಮನಾರ್ಹವಾದುದು. ಸೃಜನ, ಸೃಜನೇತರ ಕಾದಂಬರಿ, ಬರಹಗಳನ್ನು ರಚಿಸುವವರಿಗೆ ಇರಬೇಕಾದ ಅರ್ಹತೆಗಳೇನು? ಎಂಬುದನ್ನು ಪರಿಣತರ ಅವತರಣಿಕೆಗಳೊಂದಿಗೆ ವಿವರವಾಗಿ ವಿಶ್ಲೇಷಿಸಿದ್ದಾರೆ. ಕಥನೇತರ ಕೃತಿಗಳನ್ನು ಬರೆಯುವವರಿಗೆ ಲೇಖನ ದಾರಿದೀಪ.

-ಮೋಹನ್‌ರು, ಹಣಗಿ-ಇಲಕಲ್ಲ

`ನೆಲಸಿರಿ' ಅಂಕಣದಲ್ಲಿ ನರಹಳ್ಳಿ ಬಾಲಸುಬ್ರಹ್ಮಣ್ಯರವರು, ಕನ್ನಡ ಪರಂಪರೆಯೆಂದರೆ ಅದು ವಾಗ್ವಾದಗಳ ಪರಂಪರೆ ಎಂದು ಹೇಳುತ್ತಾರೆ. ಹಾಗಾಗಿ ಪರಂಪರೆಯ ವಾರಸುದಾರರಾದ ನಾವು ವಾಗ್ವಾದಗಳ ಮೂಲಕವೇ ಇಂದು ಕನ್ನಡವನ್ನು, ಕನ್ನಡ ಜಗತ್ತನ್ನು ಕಟ್ಟಬೇಕಾಗಿದೆ ಎಂಬ ಅರ್ಥಪೂರ್ಣ ಆಶಯವನ್ನು ಧ್ವನಿಸುತ್ತದೆ, ಇಂಥ ಸೂಕ್ಷ್ಮತೆ ಸಾಹಿತ್ಯ ವಿದ್ಯಾರ್ಥಿಗಳಾದ ನಮಗೆ ತುಂಬಾ ಉಪಯುಕ್ತ ಹಾಗೂ ಅತ್ಯವಶ್ಯಕ.

-ಮಧು ಎಸ್. ಬಿರಾದಾರ, ಸುಸಲಾವ, ಧಾರವಾಡ`ಸಾಹಿತ್ಯ ಸಾಂಗತ್ಯ'ದಲ್ಲಿ ವಿಮರ್ಶಕ ಜಿ.ಎಚ್. ನಾಯಕ ಅವರು ಕನ್ನಡ ಸಾಹಿತ್ಯದ ವಿವಿಧ ಲೇಖಕರ ಆಕರಗಳ ಕುರಿತು ಮಾತನಾಡುತ್ತಲೇ ತಮ್ಮ ಬಹುವಿಸ್ತಾರದ ಓದಿನ ಹರಹನ್ನು ಅದರ ಸೂಕ್ಷ್ಮತೆಯನ್ನು ಓದುಗರಿಗೆ ತಿಳಿಸಿಕೊಟ್ಟಿದ್ದಾರೆ. ಅವರ ಸಂದರ್ಶನದಲ್ಲಿ ಐದು ದಶಕದ ಸಾಹಿತ್ಯ ಚರಿತ್ರೆಯ ನೋಟಗಳು ಕಂಡುಬಂದವು.

-ಆರ್. ಶಿವಶಂಕರ ಸೀಗೆಹಟ್ಟಿ, ತಾ. ಹಿರಿಯೂರು

ನಿಮ್ಮ ಪ್ರತಿಕ್ರಿಯೆ ಇಲ್ಲಿಗೆ ಕಳುಹಿಸಿ...

ಸಂಪಾದಕರು, ಸಾಹಿತ್ಯ ಪುರವಣಿ, ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು-560 001  sahithyapuravani@prajavani.co.in

ಪ್ರತಿಕ್ರಿಯಿಸಿ (+)