ಪ್ರತಿಕ್ರಿಯೆ

ಬುಧವಾರ, ಜೂಲೈ 24, 2019
22 °C

ಪ್ರತಿಕ್ರಿಯೆ

Published:
Updated:

ಜುಲೈ 7ರ `ಭೂಮಿಕಾ~ದಲ್ಲಿ `ಸಾಧಕಿಯರು ಇವರು ದೇಶ ಕಟ್ಟಿದವರು~ ಎಂಬ ಮಾಲತಿ ಭಟ್ ಅವರ ಲೇಖನ ಓದಿ ಸಂತೋಷವಾಯಿತು. 15 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರನ್ನು ಇತಿಹಾಸ ಎಂದೂ ಮರೆಯದು.

 

ಅವರ ಸರ್ವಾಧಿಕಾರಿ ಧೋರಣೆ ಮತ್ತು ತುರ್ತು ಪರಿಸ್ಥಿತಿಯ ಕರಾಳ ನೆನಪನ್ನು ಬದಿಗಿಟ್ಟು ನೋಡಿದಾಗ ಅವರೊಬ್ಬ ದೂರದೃಷ್ಟಿಯುಳ್ಳ, ಆಧುನಿಕ ಚಿಂತನೆಯ ಆಡಳಿತಗಾರ್ತಿ ಆಗಿದ್ದುದು ಸ್ಪಷ್ಟವಾಗುತ್ತದೆ. ರಾಜಕೀಯ ಸಾಧಕಿಯರ ಆಡಳಿತವನ್ನು ನೆನಪಿಸಿದ್ದಕ್ಕೆ ಅಭಿನಂದನೆಗಳು.

-ಬಸಪ್ಪ ಸೊಲಬಪ್ಪ ಮುಳ್ಳೂರ, ಹಲಗತ್ತಿ, ಬೆಳಗಾವಿ ಜಿಲ್ಲೆ.ಲೇಖನದಲ್ಲಿ ವಿಜಯಲಕ್ಷ್ಮಿ ಪಂಡಿತ್, ಸರೋಜಿನಿ ನಾಯ್ಡು, ಕಮಲಾದೇವಿ ಚಟ್ಟೋಪಾಧ್ಯಾಯ, ಅರುಣಾ ಆಸಿಫ್ ಅಲಿ, ಕ್ಯಾಪ್ಟನ್ ಲಕ್ಷ್ಮಿ, ಪದ್ಮಜಾ ನಾಯ್ಡು, ಯಶೋಧರಮ್ಮ ದಾಸಪ್ಪ, ಪಾರ್ವತಿ ಕುಮಾರ ಮಂಗಳಂ ಅವರ ಬಗ್ಗೆಯೂ ಮಾಹಿತಿ ಇದ್ದಿದ್ದರೆ ಸೂಕ್ತವಾಗಿತ್ತು.

-ಎ.ಎಸ್.ಲೊಕ್ಕಾನಿ, ಪಾಂಡವಪುರ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry