ಮಂಗಳವಾರ, ಜೂನ್ 22, 2021
29 °C

ಪ್ರತಿನಿಧಿಗಳಿಗೆ ಪ್ರಶ್ನಿಸುವ ತಾಕತ್ತು ಬೆಳೆಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ: ಉತ್ತರ ಕರ್ನಾಟಕ ಎಷ್ಟು ಹಿಂದುಳಿದಿದೆ ಎನ್ನುವದಕ್ಕೆ ಅಫಜಲಪುರ ತಾಲ್ಲೂಕು ಸಾಕ್ಷಿಯಾಗಿದೆ. ಇಲ್ಲಿಯ ರಸ್ತೆಗಳು, ನೀರಾವರಿ ಯೋಜನೆಗಳು, ಕುಡಿಯುವ ನೀರು, ಶಿಕ್ಷಣ ವ್ಯವಸ್ಥೆ ಹಿಂದುಳಿದಿವೆ ಆದರೆ ಇಲ್ಲಿಯ ಜನರಿಗೆ ಹೋರಾಟ ಗೊತ್ತಿಲ್ಲ ಆಳುವವರಿಗೆ ಕೇಳುವರಿಲ್ಲ. ಜನಪ್ರತಿನಿಧಿಗಳಿಗೆ ಪ್ರಶ್ನಿಸುವ ತಾಕತ್ತು ಬೆಳೆಸಿಕೊಳ್ಳಬೇಕು ಎಂದು ಕರವೇ ರಾಜ್ಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದರು.ಇಲ್ಲಿನ ತಹಸೀಲ್ದಾರರ ಕಚೇರಿಯ ಮುಂಭಾಗದಲ್ಲಿ ಬುಧವಾರ ಏರ್ಪಡಿಸಿರುವ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ 3 ನೇ ಸ್ವಾಭಿಮಾನ ಕನ್ನಡ ಸಮಾವೇಶವನ್ನ ಭಾಗವಹಿಸಿ, ರಾಜ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಲವಾರು ಕನ್ನಡ ಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ರಾಜ್ಯದಲ್ಲಿ ರಾಜಕೀಯ ಹಾಳಾಗಿ ಹೋಗಿದೆ ಇಲ್ಲಿನ ಶಾಸಕರುಗಳು ಪವಿತ್ರವಾದ ವಿಧಾನಸಭೆಯನ್ನ ಅಪವಿತ್ರ ಮಾಡಿದ್ದಾರೆ.  ವಿಧಾಸಭೆಗೆ ಗುಂಡಾಗಳು, ದರೋಡಕೋರರು, ಭ್ರಷ್ಟರು ಆಯ್ಕೆಯಾಗುತ್ತಿದ್ದಾರೆ. ಇಂತಹವರಿಂದ ಅಭಿವೃದ್ಧಿ ಸಾಧ್ಯವಿಲ್ಲ ಈ ಎಲ್ಲ ಜನಪ್ರತಿನಿಧಿಗಳು ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದರು. ತಾಲ್ಲೂಕಿನಲ್ಲಿ ಕರವೇ ಅಧ್ಯಕ್ಷ ಶಿವಕುಮಾರ ನಾಟಿಕಾರ ಅವರು ಸಾಕಷ್ಟು ಕರವೇ ವತಿಯಿಂದ ಕನ್ನಡಪರ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ. ಬೆಂಗಳೂರು ಮಟ್ಟದಲ್ಲಿ ನಡೆಯುವ ಕಾರ್ಯಕ್ರಮವನ್ನು ತಾಲ್ಲೂಕು ಮಟ್ಟದಲ್ಲಿ ಮಾಡಿ ತೋರಿಸಿದ್ದಾರೆಂದು ಅವರು ತಿಳಿಸಿದರು.ತಾಲ್ಲೂಕು ಕರವೇ ಅಧ್ಯಕ್ಷ ಶಿವಕುಮಾರ ನಾಟಿಕಾರ ಮಾತನಾಡಿ ತಾಲ್ಲೂಕಿನಲ್ಲಿ 75 ಕರವೇ ಘಟಕಗಳನ್ನು ಹೊಂದಿದ್ದು, ಸುಮಾರು 4 ಸಾವಿರ ಕಾರ್ಯಕರ್ತರನ್ನು ಹೊಂದಿದೆ. ಗ್ರಾಮಗಳ ಮೂಲ ಸೌಲಭ್ಯಗಳಿಗಾಗಿ ಹೋರಾಟ ಮಾಡಿದ್ದೇವೆ ಎಂದು ಅವರ ಪ್ರಯತ್ನದ ಕುರಿತು ವಿವರಿಸಿದರು.ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ, ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ ಕರವೇ   ಬೆಳೆಯಲಿ ಎಂದು ಹಾರೈಯಿಸಿದರು. ಸಮಾವೇಶದಲ್ಲಿ ಯುವ ಸಂಗಮ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ ಸಂಯುಕ್ತ ಕರ್ನಾಟಕ ಕಾರ್ಯನಿರ್ವಾಹಕ ಸಂಪಾದಕ ಎಸ್.ಆರ್.ಮಣೂರ, ಸಂಧ್ಯಾಕಾಲ ಪತ್ರಿಕೆಯ ಸಂಪಾದಕ ಡಿ.ಶಿವಲಿಂಗಪ್ಪ, ಪುಣೆ ಕೃಷ್ಣಾ ಶಿವಾರಂ ಹೆಗಡೆ, ಕಲ್ಲೂರದ ಸಾತಲಿಂಗಪ್ಪ ಹೂಗಾರ ಅವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಮೆರವಣಿಗೆಯ ಉದ್ಘಾಟನೆಯನ್ನು ರಾಜ್ಯ ಕರವೇ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಗುರುರಾಜ ಹೊಸಕೋಟೆ ನೆರವೇರಿಸಿದರು. ಕನ್ನಡಾಂಬೆ ಭಾವಚಿತ್ರಕ್ಕೆ ಉತ್ತರ ಕರ್ನಾಟಕ ಕರವೇ ವಿಭಾಗದ ಅಧ್ಯಕ್ಷ ಸಂತೋಷ ಪಾಟೀಲ ಪೂಜೆ ಸಲ್ಲಿಸಿದರು.  ಸಮಾವೇಶದಲ್ಲಿ ಕರವೇ ಜಿಲ್ಲಾಧ್ಯಕ್ಷ ಕಲ್ಯಾಣರಾವ ಪಾಟೀಲ, ಬಡದಾಳ ತೇರಿನ ಮಠದ ಚನ್ನಮಲ್ಲ ಶಿವಾಚಾರ್ಯರು, ಹೆಚ್‌ಕೆಡಿಬಿ ಅಧ್ಯಕ್ಷ ಅಮರನಾಥ ಪಾಟೀಲ, ಮಕ್ಬೂಲ್ ಪಟೇಲ್, ಕೇಂದ್ರ ಬಾಲಕಾರ್ಮಿಕ ಸಲಹಾ ಮಂಡಳಿ ಸದಸ್ಯ ಮಹಾಂತೇಶ ಪಾಟೀಲ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ನಿಂಗದಳ್ಳಿ, ರಾಜ್ಯ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಅಣ್ಣಾರಾಯ ಅಜಗೊಂಡ, ಜಿ.ಪಂ. ಸದಸ್ಯ ಸಿದ್ಧಾರ್ಥ ಬಸರಿಗಿಡದ, ಶರಣಪ್ಪ ಕಣ್ಮೇಶ್ವರ, ವಿಠಲ ವಗ್ಗನ, ಸಿದ್ದಯ್ಯ ಆಕಾಶಮಠ, ಚಂದ್ರಶೇಖರ ಕರಜಗಿ, ಎಬಿ ಪಟೇಲ ಸೊನ್ನ, ವಿಠಲ ನಾಟಿಕಾರ, ಶ್ರೀಕಾಂತ ಚಿಂಚೋಳಿ, ಕಲ್ಲಪ್ಪ ಪ್ಯಾಟಿ ಮುಂತಾದವರು ಇದ್ದರು.

ಬಸವರಾಜ ನಿಂಬರ್ಗಿ ಸ್ವಾಗತಿಸಿದರು. ಬಾಪುಗೌಡ ಬಿರಾದಾರ ನಿರೂಪಿಸಿದರು. ಸಿದ್ಧು ಶಿವಣಗಿ ವಂದಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.