ಮಂಗಳವಾರ, ಜನವರಿ 28, 2020
29 °C

ಪ್ರತಿನಿಧಿಗಳ ನೋಂದಣಿಗೆ 15ರ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ನಗರದಲ್ಲಿ ಜನವರಿ 7ರಿಂದ ಮೂರು ದಿನಗಳ ಕಾಲ ನಡೆಯಲಿ­ರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿ­ಗಳಾಗಿ ಭಾಗವಹಿಸಲು ಇಚ್ಛಿಸುವ­ವರಿಗೆ ನೋಂದಣಿ ಮಾಡಿಕೊಳ್ಳಲು ಡಿ. 15ರ ಗಡುವನ್ನು ಕಸಾಪ ನಿಗದಿಪಡಿಸಿದೆ.ರಾಜ್ಯದ  ಸಾಹಿತ್ಯಾಸಕ್ತರು ಆಯಾ ಜಿಲ್ಲೆಗಳ ಕಸಾಪ ಕಚೇರಿಗಳಲ್ಲಿ ಪ್ರತಿ­ನಿಧಿ ಶುಲ್ಕ ರೂ.300 ಭರಿಸಿ ತಮ್ಮ ಹೆಸರನ್ನು ನೋಂದಾಯಿಸಬಹುದು.  ನೋಂದಾ­ಯಿಸಿಕೊಂಡ ಪ್ರತಿನಿಧಿಗಳಿಗೆ ಸಮ್ಮೇಳನ ನಡೆಯುವ ಮೂರು ದಿನಗಳವರೆಗೆ ಉಚಿತ ವಸತಿ, ಊಟೋಪ­ಚಾರಕ್ಕೆ ಪ್ರತ್ಯೇಕ ಕೂಪನ್‌ ವ್ಯವಸ್ಥೆ, ಲೇಖನ ಸಾಮಗ್ರಿಗಳು, ಬ್ಯಾಗ್‌, ಬ್ಯಾಡ್ಜ್‌ ನೀಡಲು ಕಸಾಪ ನಿರ್ಧರಿಸಿದೆ.ಬೆಟ್ಟ ಗುಡ್ಡಗಾಡು ಪ್ರದೇಶ­ಗಳಿಂದ ಆವೃತ­ವಾಗಿ­ರುವ ಮಡಿಕೇರಿ ನಗರವು ಅತ್ಯಂತ ಪುಟ್ಟ ಪ್ರದೇಶ. ಸಾವಿರಾರು ಸಂಖ್ಯೆ­ಯಲ್ಲಿ ಜನರು ಆಗಮಿಸಿ­ದರೆ, ಅವರಿಗೆಲ್ಲ ವಸತಿ ಕಲ್ಪಿಸುವುದು ಸವಾಲಿನ ಕೆಲಸವಾಗಲಿದೆ. ಇದನ್ನು ಮನಗಂಡಿರುವ ಕಸಾಪ ಪ್ರತಿನಿಧಿಗಳ ನೋಂದಣಿಯನ್ನು ಡಿ. 15ರ ನಂತರ ನಿಲ್ಲಿಸಲಿದೆ.ಗಡಿ ರಾಜ್ಯಗಳ ಕಸಾಪ ಘಟಕ­ಗಳಿಗೂ ನೋಂದಣಿ ಪುಸ್ತಕ ಕಳುಹಿಸಿ­ಕೊಡಲಾಗಿದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಆದ್ಯತೆ ಮೇರೆಗೆ ಅವರಿಗೆ ಊಟೋಪಚಾರ, ವಸತಿ ವ್ಯವಸ್ಥೆ ಕಲ್ಪಿಸ­ಲಾಗು­ತ್ತದೆ ಎಂದು ಕಸಾಪ ಪದಾಧಿಕಾರಿಗಳು ತಿಳಿಸಿದರು.ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಸುಮಾರು 1 ಲಕ್ಷ ಜನ ಸೇರುವ ಅಂದಾಜು ಇದೆ.  ಊಟ, ತಿಂಡಿ, ಕಾಫಿ, ಚಹಾ – ಎಲ್ಲವನ್ನೂ ಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕ­ರಿಗೂ ಉಚಿತವಾಗಿ ಒದಗಿಸಲಾಗು­ವುದು.ವಸತಿ ವ್ಯವಸ್ಥೆಯನ್ನು ನೋಂದಣಿ ಮಾಡಿಕೊಂಡ ಪ್ರತಿನಿಧಿ­ಗಳಿಗೆ ಮಾತ್ರ ಕಲ್ಪಿಸಲಾಗುತ್ತದೆ. ಸಾರ್ವಜನಿಕರು ತಮ್ಮ ವಸತಿಯನ್ನು ತಾವೇ ಸ್ವತಃ ಮಾಡಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಟಿ.ಪಿ. ರಮೇಶ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)