ಶುಕ್ರವಾರ, ಮೇ 7, 2021
27 °C

ಪ್ರತಿಭಟನೆಗೆ ಮುಂದಾದ ಶ್ರೀಲಂಕಾ ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ (ಪಿಟಿಐ): ಸುಮಾರು ಐದು ಸಾವಿರಕ್ಕೂ ಅಧಿಕ ಭಾರತೀಯ ಮೀನುಗಾರರು ಶ್ರೀಲಂಕಾಕ್ಕೆ ಸೇರಿದ ಸಮುದ್ರದಲ್ಲಿ ಅತಿಕ್ರಮ ಪ್ರವೇಶ ಮಾಡಿ ಮೀನುಗಾರಿಕೆ ನಡೆಸುತ್ತಿರುವುದನ್ನು ತಡೆಹಿಡಿಯುವಂತೆ ಸಚಿವ ದೊಗ್ಲಾಸ್ ದೇವಾನಂದ ಆಗ್ರಹಿಸಿದ್ದಾರೆ. ಭಾರತೀಯ ಮೀನುಗಾರರು ಶ್ರೀಲಂಕಾದ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವುದರಿಂದ ಇಲ್ಲಿನ ಮೀನುಗಾರರಿಗೆ ತೊಂದರೆ ಆಗುತ್ತಿದೆ. ಇದರ ವಿರುದ್ಧ ಮೀನುಗಾರರ ಜತೆ ಸೇರಿ ಭಾರತದಲ್ಲಿ ಪ್ರತಿಭಟನೆ ನಡೆಸಲು ಚಿಂತನೆ ನಡೆಸಿರುವುದಾಗಿ ದೇವಾನಂಗ ತಿಳಿಸಿದ್ದಾರೆ.

ಭಾರತದ ಕೆಲವು ಸಾವಿರ ದೋಣಿಗಳು ಹಾಗೂ ಐದು ಸಾವಿರಕ್ಕೂ ಅಧಿಕ ಮೀನುಗಾರರು ಅಕ್ರಮವಾಗಿ ರಾಷ್ಟ್ರದ ಸಮುದ್ರ ಗಡಿಯೊಳಗೆ ನುಸುಳಿ ಮೀನುಗಾರಿಕೆ ನಡೆಸುತ್ತಿದ್ದು ಇದನ್ನು ತಡೆಯಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.