ಪ್ರತಿಭಟನೆಯಲ್ಲಿ ಭಾಗವಹಿಸಲು ಮನವಿ

7

ಪ್ರತಿಭಟನೆಯಲ್ಲಿ ಭಾಗವಹಿಸಲು ಮನವಿ

Published:
Updated:

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐ.ಐ.ಐ.ಟಿ.) ಮತ್ತು  ಸರ್ಕಾರಿ ವೈದ್ಯಕೀಯ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ನೀಡಲು ಆಗ್ರಹಿಸಿ ಗುಲ್ಬರ್ಗದಲ್ಲಿ ಅ.4ರಂದು ನಡೆಯುವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲು ಜೈ ಕರ್ನಾಟಕ ರಕ್ಷಣಾ ವೇದಿಕೆಯಿಂದ ಅ. 3ರಂದು ಬೃಹತ್ ಪ್ರತಿಭಟನೆ ಹಾಗು ಜನಾಂದೋಲನ ಹಮ್ಮಿಕೊಂಡಿದ್ದು ಹೋರಾಟದಲ್ಲಿ ಈ ಭಾಗದ ಹಿರಿಯ ಮಠಾಧೀಶರು, ಶಿಕ್ಷಣ ತಜ್ಞರು, ಎಲ್ಲಾ ಜಾತಿಯ ಧರ್ಮಗುರುಗಳು ವಿದ್ಯಾರ್ಥಿಗಳು ಪಾಲ್ಗೊಳ್ಳಲು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಅರುಣಕುಮಾರ ಎಸ್. ಪಾಟೀಲ ಮನವಿ ಮಾಡಿದ್ದಾರೆ.ಈ ಹಿನ್ನೆಲೆಯಲ್ಲಿ ಗುಲ್ಬರ್ಗದ ಸರ್ವಜ್ಞ ಕಾಲೇಜು, ಶ್ರೀಗುರು ಕಾಲೇಜು, ಗುರುಕುಲ ಕಾಲೇಜು, ವಿ.ಜಿ. ವುಮೆನ್ಸ್ ಪಾಲಿಟೆಕ್ನಿಕ್ ಕಾಲೇಜು, ಸೇಂಟ್‌ಮೇರಿ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಎಚ್.ಕೆ.ಇ. ಪಾಲಿಟೆಕ್ನಿಕ್ ಕಾಲೇಜು ಮುಂತಾದ ಕಾಲೇಜುಗಳಲ್ಲಿ ಅರುಣಕುಮಾರ ಎಸ್. ಪಾಟೀಲ ನೇತೃತ್ವದಲ್ಲಿ ಜಾಗೃತಿ ಅಭಿಯಾನ ನಡೆಯಿತು.ವೇದಿಕೆ ಪದಾಧಿಕಾರಿಗಳಾದ ಧರ್ಮಸಿಂಗ್ ತಿವಾರಿ, ಮಂಜುನಾಥ ಹಾಗರಗಿ, ಚನ್ನುಮರಬ, ಶ್ರೀಕಾಂತ ಆಲೂರ, ಚಂದ್ರಕಾಂತ ಪಾಟೀಲ ಮುಂತಾದವರು ಇದ್ದರು ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ಧರ್ಮಸಿಂಗ್ ತಿವಾರಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry