ಗುರುವಾರ , ಅಕ್ಟೋಬರ್ 24, 2019
21 °C

ಪ್ರತಿಭಟನೆಯ ಬಿಸಿ

Published:
Updated:

ರಿಷಿಕಾ ಸಿಂಗ್ ಕೂಲಾಗಿಯೇ ಇದ್ದರು. ಬಷೀದ್ ನಿರ್ದೇಶನದ `ಯಾರಾದ್ರೆ ನನಗೇನು?~ ಚಿತ್ರದ ಮುಹೂರ್ತಕ್ಕೆ ತುಂಡುಡುಗೆ ತೊಟ್ಟು ಬಂದಿದ್ದ ಅವರ ಮುಖದಲ್ಲಿ ಹೂನಗೆ ಇತ್ತು.ಮಂತ್ರೋಚ್ಚಾರಣೆ ನಡುವೆ ಕಂಠೀರವ ಸ್ಟುಡಿಯೋದಲ್ಲಿ ಸಿನಿಮಾದ ಮುಹೂರ್ತದ ಪೂಜೆ ನಡೆಯುತ್ತಿದ್ದರೆ, ಹೊರಗೆ ಜೋರು ಪ್ರತಿಭಟನೆಯ ಕೂಗು. ಮಹಿಳಾ ಸಂಘಟನೆಯೊಂದು ಚಿತ್ರದ ನಾಯಕಿ ರಿಷಿಕಾ ಸಿಂಗ್ ಸಿನಿಮಾಗಾಗಿ ನೀಡಿರುವ ಫೋಟೋಶೂಟ್ ಚಿತ್ರಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿತ್ತು. ಅವರಿಗೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲವಾದರೂ ಸಂಘಟನೆಯ ಕೂಗು ಇದ್ದಕ್ಕಿದ್ದಂತೆ ತಣ್ಣಗಾಯಿತು. ಆ ಬಗ್ಗೆ ಮಾತನಾಡಿದ ರಿಷಿಕಾ, `ಭಾವಚಿತ್ರದಲ್ಲಿ ಸ್ಕಿನ್ ಶೋ ಇದೆ ಎಂದು ಮಹಿಳಾ ಸಂಘಟನೆ ಹೇಳುತ್ತಿದೆ. ಆದರೆ ಎಲ್ಲಿದೆ ಸ್ಕಿನ್ ಶೋ~ ಎಂದು ಪ್ರಶ್ನಿಸಿದರು.`ಮೇಕಪ್ ಮಾಡಿಕೊಂಡು ಡಾನ್ಸ್ ಮಾಡುವುದೇ ನಟನೆಯಲ್ಲ. ಇಂಥ ಹಾರ್ಡ್‌ವರ್ಕ್ ಅಗತ್ಯ ಇದೆ. ರಾಜಸ್ತಾನದ ಮರಳು ಗಾಡಿನಲ್ಲಿ, ಅದೂ ಉರಿಬಿಸಿಲಿನಲ್ಲಿ ಫೋಟೋಶೂಟ್ ಮಾಡಿದ್ದೇವೆ. ಎಷ್ಟು ಕಷ್ಟ ಇತ್ತು ಗೊತ್ತಾ?~ ಎಂದು ಉರಿದುಬಿದ್ದರು.ಫೋಟೋ ಅಶ್ಲೀಲವಾಗಿರುವ ಬಗ್ಗೆ ಪ್ರಶ್ನಿಸಿದವರಿಗೆ `ನನ್ನ ಅಮ್ಮ ಒಪ್ಪಿದ ಮೇಲೆ ಯಾರ ಒಪ್ಪಿಗೆಯೂ ನನಗೆ ಬೇಕಾಗಿಲ್ಲ. ನನ್ನ ಕುಟುಂಬ ನನ್ನ ಬೆಂಬಲಕ್ಕೆ ಇರುವಾಗ ನಾನು ಯಾರಿಗೂ ಅಂಜಬೇಕಿಲ್ಲ~ ಎಂದು ಘೋಷಿಸಿ ತಣ್ಣಗೇ ಪ್ರಶ್ನೆಗಳನ್ನು ಎದುರಿಸಿದರು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)