ಪ್ರತಿಭಟನೆ, ಉಪವಾಸಕ್ಕೆ ಸಾಕ್ಷಿಯಾದ ಗಾಂಧಿ ಜಯಂತಿ

7

ಪ್ರತಿಭಟನೆ, ಉಪವಾಸಕ್ಕೆ ಸಾಕ್ಷಿಯಾದ ಗಾಂಧಿ ಜಯಂತಿ

Published:
Updated:

ಕೋಲಾರ: ಜಿಲ್ಲೆಯಲ್ಲಿ ಮಂಗಳವಾರ ಪ್ರತಿಭಟನೆ, ಉಪವಾಸ ಮತ್ತು ಸರ್ವಧರ್ಮ ಪ್ರಾರ್ಥನೆಗೆ ಗಾಂಧಿ ಜಯಂತಿ ಸಾಕ್ಷಿಯಾಯಿತು.ಬೆಳಿಗ್ಗೆ ಮೊದಲಿಗೆ ಜಿಲ್ಲಾಡಳಿತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆದರೆ, ನಂತರ ಶಾಶ್ವತ ನೀರಾವರಿಗೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಅಲ್ಲಿಯೇ ಧರಣಿ ನಡೆಸಿದರು. ಜನಜಾಗೃತಿ ಮತದಾರರ ವೇದಿಕೆ ಕಲಾವಿದರು ಗಾಂಧಿವನದಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡಿದರು. ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಲಾಯಿತು. ಮುಳಬಾಗಲಿನ ವಿವೇಕಾನಂದ ನಗರದಲ್ಲಿ ತೆರವುಗೊಳಿಸಿದ ಗುಡಿಸಲು ವಾಸಿಗಳಿಗೆ ಪರ್ಯಾಯ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಉಪವಾಸ-ಧರಣಿ ಆರಂಭಿಸಿದರು.ಜಿಲ್ಲಾಡಳಿತ: ನಗರದ ಗಾಂಧಿವನದಲ್ಲಿ ಮಂಗಳವಾರ ಗಾಂಧಿಜಯಂತಿ ಪ್ರಯುಕ್ತ  ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅವರು ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಗೃಹರಕ್ಷಕ ದಳದ ಕಮಾಂಡೆಂಟ್ ಬಿ.ಮರಿಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಎಸ್.ಪೆದ್ದಪ್ಪಯ್ಯ, ಉಪವಿಭಾಗಾಧಿಕಾರಿ ಆಯೀಷಾ ಪರ್ವೀನ್, ನಗರಸಭೆ ಅಧ್ಯಕ್ಷೆ ನಾಜಿಯಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಎನ್.ರಮಾದೇವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ. ಜುಲ್ಫಿಕರ್ ಉಲ್ಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ವಿ. ಪದ್ಮನಾಭ್, ಜಿಲ್ಲಾ ಶಾಂತಿ ಸಮಿತಿ ಅಧ್ಯಕ್ಷ ಶ್ರೀಕೃಷ್ಣ, ರೆಡ್‌ಕ್ರಾಸ್ ಸಂಸ್ಥೆಯ ವಿ.ಪಿ.ಸೋಮಶೇಖರ್, ನಗರಸಭೆ ಆಯುಕ್ತ ಎಂ.ಮಹೇಂದ್ರಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್ ಉಪಸ್ಥಿತರ್ದ್ದಿದರು.

 

ಇದೇ ಸಂದರ್ಭದಲ್ಲಿ ಭಾರತ ಸೇವಾ ದಲದ ಮಂಜುನಾಥ್ ನೇತೃತ್ವದಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಯಿತು. ನವೀದ್ ಅಲಂ ಕುರ್ ಆನ್ ಓದಿದರು. ರೆ.ಫಾ.ಧೂಳಪ್ಪ ಬೈಬಲ್ ಓದಿದರು. ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ನಂತರ, ಗಾಂಧಿವನದ ಸಮೀಪ ವಿಶೇಷ ರಿಯಾಯಿತಿ ದರದಲ್ಲಿ ಖಾದಿ ಉತ್ಪನ್ನಗಳ ಮಾರಾಟ ಸೌಲಭ್ಯವಿದ್ದ ಖಾದಿ ಭಂಡಾರ ಮಳಿಗೆಗೆ ಜಿಲ್ಲಾಧಿಕಾರಿ ಡಾ.ವಿಶ್ವನಾಥ್ ಭೇಟಿ ನೀಡಿದರು.ಸನ್ಮಾನ: ದೇವರಾಜ ಅರಸ್ ವೈದ್ಯಕೀಯ ಕಾಲೇಜಿನ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಎಂ.ವಿ.ಶ್ರೀನಿವಾಸಗೌಡ ಅವರನ್ನು ಆರ್.ಎಲ್.ಜಾಲಪ್ಪಆಸ್ಪತ್ರೆಯ ನಗರ ಘಟಕದಲ್ಲಿ ಕುಲಪತಿ ಡಾ.ಪ್ರೇಮನಾಥ ಎಫ್.ಕೊಟೂರ್ ಸನ್ಮಾನಿಸಿದರು. ನಂತರ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ಪ್ರಮುಖ ರಸ್ತೆಗಳಲ್ಲಿ ಖಾದಿ ಟೋಪಿ ಧರಿಸಿ ಮೆರವಣಿಗೆ ನಡೆಸಿದರು.ಶಾಶ್ವತ ನೀರಾವರಿ: ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಶಾಶ್ವತ ನೀರಾವರಿಗಾಗಿ ಆಗ್ರಹಿಸಿ ನಗರದ ಗಾಂಧಿವನದಲ್ಲಿ ಸಾಂಕೇತಿಕ ಧರಣಿ ನಡೆಸಿದರು. ಪರಮಶಿವಯ್ಯ ವರದಿಯನ್ನು ಜಾರಿಗೊಳಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದ್ದು, ಗಾಂಧಿ ಜಯಂತಿ ಸಂದರ್ಭದಲ್ಲಾದರೂ ಸರ್ಕಾರ ಸ್ಪಷ್ಟ ನಿಲುವು ತಾಳಬೇಕು ಎಂದು ಆಗ್ರಹಿಸಿದರು. ಮುಖಂಡರಾದ ನೀಲಕಂಠಪುರ ಮುನೇ ಗೌಡ, ಬೇತಮಂಗಲದ ನಾರಾಯಣ ಸ್ವಾಮಿ, ಕೃಷ್ಣಪ್ಪ. ಕಾರಿ ವಿಶ್ವನಾಥ್, ವಡ್ಡಹಳ್ಳಿ ಮಂಜುನಾಥ್, ಮುನಿಕೃಷ್ಣ, ಬಿನಸನಹಳ್ಳಿ ಶ್ರೀರಾಮ್, ಕಾಡುಗೌಡಹಳ್ಳಿ ಮಾರಪ್ಪ, ಪ್ರಭಾಕರ್, ಶ್ರೀನಿವಾಸ ಮೂರ್ತಿ, ಪುಟ್ಟರಾಜು ಭಾಗವಹಿಸಿದ್ದರು.ಜೀವನ್ ಆಶಾ: ನಗರದ ಅಂಬೇಡ್ಕರ್ ನಗರದಲ್ಲಿರುವ ಜೀವನ್ ಆಶಾ ನೆಟ್‌ವರ್ಕ್ ಸದಸ್ಯರು ಮತ್ತು ಎಚ್‌ಐವಿ ಸೋಂಕಿತರು ಗಾಂಧಿ ಜಯಂತಿಯನ್ನು ಆಚರಿಸಿದರು. ಸಂಸ್ಥೆಯ ಸಂಚಾಲಕ ಸಿ.ಶ್ರೀನಿವಾಸ್, ರತ್ನಮ್ಮ,  ಆಪ್ತ ಸಮಾಲೋಚಕರಾದ ಜಯಶಂಕರ್, ಅಧ್ಯಕ್ಷ ಕೆ.ಕಾಶಿಬಾಬು, ಕಾರ್ಯದರ್ಶಿ ಪುಷ್ಪಲತಾ ಪಾಲ್ಗೊಂಡಿದ್ದರು.ದೇಶಭಕ್ತಿ ಗೀತೆ: ಗಾಂಧಿವನದಲ್ಲಿ ವಿವಿಧ ಸಂಘಟನೆಗಳ ಮಂದಿ ಗಾಂಧಿಜಯಂತಿ ಆಚರಿಸಿ ತೆರಳಿದ ಬಳಿಕ ಹಾಜರಾದ ಜನಜಾಗೃತಿ ಮತದಾರರ ವೇದಿಕೆಯ ಕಲಾವಿದರು ದೇಶಭಕ್ತಿ ಗೀತೆ ಗಾಯನ ಪ್ರಸ್ತುತಪಡಿಸಿದರು. ಡಿ.ನಾರಾಯಣಸ್ವಾಮಿ, ಸ್ಟ್ರಗಲ್ ಮಂಜು, ಕೆ.ಗೌತಮ್, ಕಾಶಿನಾಥ್, ರಾಮಕ್ಕ, ವೆಂಕಟರತ್ನ, ವೆಂಕಟರಮಣಪ್ಪ ವಿವಿಧ ಗೀತೆಗಳನ್ನು ಹಾಡಿದರು.ಚರ್ಚಾ ಸ್ಪರ್ಧೆ: ತಾಲ್ಲೂಕಿನ ಸುಟಗೂರಿನ ಸಬರಮತಿ ಶಾಲೆಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ `ಸತ್ಯಾಗ್ರಹ~ ವಿಷಯದ ಕುರಿತು ಜಿಲ್ಲಾಮಟ್ಟದ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶಾಲೆ ಕಾರ್ಯದರ್ಶಿ ಸಿ.ಬೈರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು. ಖಚಾಂಚಿ ಟಿ.ಪಿ.ನಾರೆಪ್ಪ ಅತಿಥಿಯಾಗಿದ್ದರು. 17 ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.ಗಾಂಧಿ ತತ್ವ ಅನುಸರಿಸಲು ಸಲಹೆ

ಮಾಲೂರು: ಗಾಂಧಿ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಹೇಳಿದರು.ಗಾಂಧಿ ಜಯಂತಿ ಅಂಗವಾಗಿ ಮಂಗಳವಾರ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಾಂಧಿ ವೃತ್ತದ ಬಳಿ ಇರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿವೇಕಾನಂದ ಶಾಲೆ ಮಕ್ಕಳು ಸಾರ್ವಜನಿಕರಿಗೆ ಸಿಹಿ ಹಂಚಿದರು.ತಹಶೀಲ್ದಾರ್ ಹನುಮಂತರಾಯ, ಪುರಸಭೆ ಅಧ್ಯಕ್ಷೆ ಅಮುದಾ, ಉಪಾಧ್ಯಕ್ಷ ಸಿ.ಪಿ.ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಸೇರಿದಂತೆ ಪುರಸಭೆಯ ಎಲ್ಲಾ ಸದಸ್ಯರು, ಮುಖಂಡರಾದ ಎಂ.ವಿ.ವೇಮನ, ತಬಲ ನಾರಾಯಣಪ್ಪ, ವಿವೇಕಾನಂದ ಶಾಲೆಯ ಪ್ರೊ.ಶ್ರೀನಿವಾಸ್ ಮೂರ್ತಿ ಉಪಸ್ಥಿತರಿದ್ದರು.ವಿವಿಧೆಡೆ ಗಾಂಧಿ ಜಯಂತಿ: ಪಟ್ಟಣ ಹೊರವಲಯದಲ್ಲಿರುವ ಬಾಪೂಜಿ ವಿದ್ಯಾಸಂಸ್ಥೆಗಳಿಂದ ಗಾಂಧಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಗಾಂಧಿ ಭಾವಚಿತ್ರಕ್ಕೆ ಅಲಂಕಾರ ಮಾಡಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಗಾಂಧೀಜಿ ಬಗ್ಗೆ ಮಾಹಿತಿಯುಳ್ಳ ಪುಸ್ತಕಗಳನ್ನು ಸಾರ್ವಜನಿಕರಿಗೆ ಹಂಚಲಾಯಿತು. ಪಟ್ಟಣದ ಸರ್ಕಾರಿ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು ವಿತರಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಎಂ.ವಿ.ಹನುಮಂತಯ್ಯ, ಸದಸ್ಯರಾದ ಆಂಜಿನಪ್ಪ, ವೆಂಕಟೇಶ್, ರುದ್ರಪ್ಪ, ಡಾ.ಶ್ರೀನಿವಾಸ್ ಗೌಡ, ಡಾ.ಶ್ರೀನಿವಾಸನ್ ಉಪಸ್ಥಿತರಿದ್ದರು.ವಿಶೇಷ ಗ್ರಾಮ ಸಭೆ

ಮಾಲೂರು: ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಪುಟ್ಟಸ್ವಾಮಿ ಹೇಳಿದರು.ತಾಲ್ಲೂಕಿನ ನೊಸಗೆರೆ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಶೇ 25ರ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು.ವಿಶೇಷ ಗ್ರಾಮ ಸಭೆ ನಡೆಸುವ ಮೂಲಕ ದೇಶವ್ಯಾಪಿ ಗಾಂಧಿ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ. ಇಂದಿನ ಯುವ ಪೀಳಿಗೆ ಗಾಂಧೀಜಿ ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗಿ, ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಹೇಳಿದರು.ನೊಸಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಂ.ಅಶೋಕ್ ಕುಮಾರ್, ಉಪಾಧ್ಯಕ್ಷ ಕೆ.ವಿ.ಆರ್.ವೆಂಕಟರೆಡ್ಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಿಶೋರ್ ಕುಮಾರ್, ಸದಸ್ಯರಾದ ಬಿ.ಎನ್.ಮಲ್ಲಿಕಾರ್ಜುನಯ್ಯ, ವೆಂಕಟೇಶಪ್ಪ, ಕಲಾವಿದ ನಾಗರಾಜ್, ಸಿ.ಎಂ.ನಾರಾಯಣಸ್ವಾಮಿ, ಎಂ.ನಾಗರಾಜ್, ಕೃಷ್ಣಪ್ಪ, ಪಾರ್ವತಮ್ಮ, ಟಿ.ವಿ.ನಾಗೇಶ್ ಉಪಸ್ಥಿತರಿದ್ದರು.ಪ್ರತಿಮೆಗೆ ಅಭಿಷೇಕ, ಮಾಲಾರ್ಪಣೆ

ಬಂಗಾರಪೇಟೆ: ಪಟ್ಟಣದಲ್ಲಿ ಮಂಗಳವಾರ ವಿವಿಧ ಸಂಘ ಸಂಸ್ಥೆಗಳ ವತಿಯಿಂದ  ಗಾಂಧಿ ಜಯಂತಿ ಆಚರಿಸಲಾಯಿತು. ಪುರಸಭೆ ವತಿಯಿಂದ ಉದ್ಯಾನವನದಲ್ಲಿರುವ ಗಾಂಧಿ ಪ್ರತಿಮೆಗೆ ಅಭಿಷೇಕ, ಮಾಲಾರ್ಪಣೆ ಮಾಡಲಾಯಿತು. ಕುವೆಂಪು ವೃತ್ತದಲ್ಲಿ ಕನ್ನಡ ಸಂಘದ ವತಿಯಿಂದ ಗಾಂಧಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಪಟ್ಟಣದ ನವಚೇತನ ಪದವಿ ಪೂರ್ವ ಕಾಲೇಜಿನಲ್ಲಿ  ಮಹಾತ್ಮ ಗಾಂಧಿ  ವಿಷಯದ ಬಗ್ಗೆ ವಿಚಾರಧಾರೆ ಏರ್ಪಡಿಸಲಾಗಿತ್ತು. ಸಂಸ್ಥೆಯ ಕಾರ್ಯದರ್ಶಿ ಎಲ್.ಆರ್.ರಾಮಕೃಷ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಮಹಾತ್ಮ ಗಾಂಧಿ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಂತರ ಸಿಹಿಯನ್ನು ಹಂಚಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry