ಪ್ರತಿಭಟನೆ ಮಧ್ಯೆ ತಸ್ಲಿಮಾ ಕೃತಿ ಬಿಡುಗಡೆ

7

ಪ್ರತಿಭಟನೆ ಮಧ್ಯೆ ತಸ್ಲಿಮಾ ಕೃತಿ ಬಿಡುಗಡೆ

Published:
Updated:

ಕೋಲ್ಕತ್ತ (ಪಿಟಿಐ): ವಿವಾದತ್ಮಾಕ ಲೇಖಕಿ ತಸ್ಲಿಮಾ ನಸ್ರೀನ್ ಅವರು ಏಳು ಭಾಗಗಳಲ್ಲಿ ರಚಿಸಿರುವ ಆತ್ಮಚರಿತ್ರೆ `ನಿರ್‌ಬಸನ್~ ಪ್ರತಿಭಟನೆಯ ನಡುವೆ ಬುಧವಾರ ಇಲ್ಲಿ ಲೋಕಾರ್ಪಣೆಗೊಂಡಿತು.ನಸ್ರೀನ್ ಅವರ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲು ಒಪ್ಪಿದ್ದ `ಕೋಲ್ಕತ್ತ ಪುಸ್ತಕ ಮೇಳ~ವು ಮೂಲಭೂತವಾದಿಗಳ ಪ್ರತಿಭಟನೆಯ ಹಿನ್ನಲೆಯಲ್ಲಿ ಕಾರ್ಯಕ್ರಮ ಸಂಘಟನೆಯಿಂದ ಹಿಂದೆ ಸರಿಯಿತು. ಆಯೋಜಕರ ಈ ಕ್ರಮವನ್ನು ಖಂಡಿಸಿ ಈ ಮೇಳದ ಹೊರಭಾಗದಲ್ಲಿ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.`ಕೆಲವು ಧಾರ್ಮಿಕ ಮೂಲಭೂತವಾದಿಗಳು ನನ್ನ ಆತ್ಮಚರಿತ್ರೆ ಹೊರಬರಬಾರದು ಎಂದು ಪ್ರಯತ್ನಿಸಿದವು. ಇದಕ್ಕೆ `ಕೋಲ್ಕತ್ತ ಪುಸ್ತಕ ಮೇಳ~ದ ಆಯೋಜಕರು ಲೋಕಾರ್ಪಣೆ ಕಾರ್ಯಕ್ರಮವನ್ನು ರದ್ದು ಪಡಿಸಿದ್ದಾದರೂ ಏಕೆ?~ ಎಂದು ಕೃತಿ ಲೋಕಾರ್ಪಣೆ ಸ್ಥಳದಲ್ಲಿ ಹಾಜರಿಲ್ಲದ ತಸ್ಲಿಮಾ `ಟ್ವಿಟ್ಟರ್~ನಲ್ಲಿ ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry